ಉಪ್ಪಿನಂಗಡಿ: ದೋಣಿಯ ಕಾರ್ಯಕ್ಷಮತೆ ಪರಿಶೀಲನೆ

0

ಉಪ್ಪಿನಂಗಡಿ: ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹ ಹಾಗೂ ಇತರ ಜಲಸಂಬಂಽತ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಉಪ್ಪಿನಂಗಡಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡದವರು ನೇತ್ರಾವತಿ ನದಿಯಲ್ಲಿ ರಬ್ಬರ್ ದೋಣಿಯ ಪ್ರಾಯೋಗಿಕ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ನಡೆಸಿದರು.


ಪ್ರಾಯೋಗಿಕ ಕಾರ್ಯಾಚರಣೆಯಲ್ಲಿ ರಬ್ಬರ್ ದೋಣಿಯ ಸುರಕ್ಷಿತ ಚಾಲನೆ, ಜೀವರಕ್ಷಕ ಸಾಧನಗಳ ಸಮರ್ಪಕ ಬಳಕೆ, ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ವಿಧಾನ ಹಾಗೂ ತಂಡದ ಸದಸ್ಯರ ಸಮನ್ವಯವನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ ಅವರು ರಬ್ಬರ್ ದೋಣಿಯನ್ನು ಯಶಸ್ವಿಯಾಗಿ ಚಾಲನೆ ಮಾಡಿದರು.


ಈ ಸಂದರ್ಭ ಉಪ್ಪಿನಂಗಡಿ ಉಪ ತಹಶೀಲ್ದಾರ್ ಕವಿತಾ, ಕಂದಾಯ ನಿರೀಕ್ಷಕ ಗೋಪಾಲ್, ಉಪ್ಪಿನಂಗಡಿ ನಾಡ ಕಚೇರಿಯ ಆಡಳಿತಾಧಿಕಾರಿ ನಮಿತಾ, ಕಂದಾಯ ಗ್ರಾಮ ಸಹಾಯಕ ಯತೀಶ್, ಗೃಹರಕ್ಷಕ ದಳದ ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಸೆಕ್ಷನ್ ಲೀಡರ್ ದಿನೇಶ್ ಬೊಳ್ಳಾರ್, ಗೃಹರಕ್ಷಕರಾದ ಸೋಮನಾಥ್, ಸಮದ್, ಶಿಭುಜಾನ್ ಹಾಗೂ ಡ್ಯಾಮ್ ಸಿಬ್ಬಂದಿ ಸುದರ್ಶನ್ ಗಾಣಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here