







ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯದ ಮಾದೇರಿ ಒಕ್ಕೂಟದ ತ್ರೈಮಾಸಿಕ ಸಭೆ ಇತ್ತೀಚೆಗೆ ಪುಚ್ಚೇರಿ ಶಾಲೆಯಲ್ಲಿ ನಡೆಯಿತು.


ಸಭೆಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜಿ. ವರ್ಗಿಸ್, ಉಪಾಧ್ಯಕ್ಷರಾಗಿ ಸುಭಾಷ್, ಕಾರ್ಯದರ್ಶಿಯಾಗಿ ಯಶ್ವಿನಿ, ಜೊತೆಕಾರ್ಯದರ್ಶಿಯಾಗಿ ರೋಹಿಣಿ ಹಾಗೂ ಕೋಶಾಧಿಕಾರಿಯಾಗಿ ರೂಪಾವತಿ ಆಯ್ಕೆಯಾಗಿದ್ದಾರೆ.













