ಮಾದಕ ದ್ರವ್ಯಗಳ ದುರುಪಯೋಗ ಪ್ರಬಂಧ ಸ್ಪರ್ಧೆ : ಜು.11ಕ್ಕೆ ವಿಜೇತರಿಗೆ ಬಹುಮಾನ ವಿತರಣೆ

0


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ (ಪುತ್ತೂರು ಉಪ ವಿಭಾಗ), ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಂಯುಕ್ತ ಆಶ್ರಯದಲ್ಲಿ “ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನ-2026” ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಜು.11ರಂದು ಮಧ್ಯಾಹ್ನ 3.00 ಗಂಟೆಗೆ ಪುತ್ತೂರಿನ ನೆಹರುನಗರದ ಸುಧಾನ ವಿದ್ಯಾಸಂಸ್ಥೆಗಳ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ.


ಪ್ರಬಂಧ ಸ್ಪರ್ಧೆಯಲ್ಲಿ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು, ತಜ್ಞರ ಮೌಲ್ಯಮಾಪನದ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ವಿಭಾಗಗಳಲ್ಲಿ ಒಟ್ಟು ೫೦ ಮಂದಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ, ಕನ್ನಡದ ಶಾಲು ಹಾಗೂ ಅಭಿನಂದನಾ ಪತ್ರ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಸುದಾನ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕ ರೇವಿಜಯ್ ಹಾರ್ವಿನ್ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಭೂಮಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಬಿ., ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ವಚನ ಜಯರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕೇಶವ ಆಮೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಅಲ್ಲದೆ “ಮಾದಕತೆ ಮಾರಣಾಂತಿಕ” ವಿಷಯದ ಕುರಿತು ಸೌಹಾರ್ದ ಭಾಷಣಕಾರರು ಹಾಗೂ ಪ್ರೇರಣಾ ತರಬೇತಿದಾರ ಕೆ. ಎಂ. ಇಕ್ಬಾಲ್, ಬಾಳಿಲ ಅವರು ವಿಶೇಷ ಮಾಹಿತಿ ನೀಡಲಿದ್ದಾರೆ. ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಪ್ರಬಂಧ ಸ್ಪರ್ಧೆಯ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬಹುಮಾನ ವಿಜೇತರ ಪಟ್ಟಿ:
ಸಾರ್ವಜನಿಕ ವಿಭಾಗದ ಇಂಚರ ತಾರಾನಾಥ್, ಸವಣೂರು, ಗೀತಾ ಕೊಂಕೋಡಿ, ರಹ್ಮತ್ ಪುತ್ತೂರು ಬೊಳುವಾರು, ತ್ವಯ್ಯಿಬ್ ಮಾಹ್‌ಲರಿ ಕುಂಬ್ರ (ಪ್ರ), ಡಾ. ಮೈತ್ರಿ ಭಟ್ ವಿಟ್ಲ, ಶ್ರೀಕಲಾ ಬಿ ಕಾರಂತ್ ಅಳಿಕೆ, ಅಕ್ಷತಾ ಸತೀಶ್ ಪುತ್ತೂರು, ವನಿತಾ ಕೆ ಈಶ್ವರಮಂಗಲ (ದ್ವಿ), ಶೈಲಜಾ ಕೇಕಣಾಜೆ, ಶರ್ಮಿಳಾ ನಾಗೇಶ್, ಜಯಶ್ವಿನಿ ದೇರಾಜೆ ಈಶ್ವರಮಂಗಲ, ಡಾ. ಹರಿಪ್ರಸಾದ್ ಉಪ್ಪಿನಂಗಡಿ(ತೃ), ಪ್ರೋತ್ಸಾಹಕ ಬಹುಮಾನವಾಗಿ ಕೆ. ದಿನೇಶ್ ರಾವ್ ಕಂಪ, ಕಾಸರಗೋಡು, ಸರಳಾ ಬಿ. ದೊಡ್ಡಡ್ಕ, ಅಬ್ದುಲ್ ಶಂಮಸ್ ಪಟ್ರ್‌ಕೋಡಿ, ಜಯಶ್ರೀ ಎಸ್. ಚಾಕೋಟೆ, ಸಂತ್ಯಾ ರಂಶೀದಾ, ಅಶ್ವಿನಿ ರಾಘವೇಂದ್ರ ಶೆಣೈ, ಅಶೋಕ್ ಬಿ.ಕೆ. ಪನೆತ್ತಡ್ಕ, ನಾರಾಯಣ ಕುಂಬ್ರ, ಪ್ರಗತಿ ಭಂಡಾರಿ, ಎಡಮೊಗರು, ದಿವ್ಯ ರೈ ಪಿ., ಪೆರುವಾಜೆ, ಕಾವ್ಯಶ್ರೀ ಎಸ್., ಸಾಮೆತಡ್ಕ, ಝುಲೈಖಾ ಮುಮ್ತಾಜ್, ಮಂಗಳೂರು, ಝುನೈಫ್ ಕೊಳ್ಪೆ, ನೆಲ್ಯಾಡಿ, ಲೀನಾ ಮೆಂಡೊನ್ಸಾ, ಕೊಡಿಜಾಲು, ಗುರುಪ್ರಸಾದ್ ಭಟ್, ಕಿನ್ನಿಮೂಲ್ಕಿ, ಬಾಲಕೃಷ್ಣ ಪಾಟಲಿ, ರೆಂಜ, ನಯನ ರತ್ನಕುಮಾರ್ ಚಾರ್ವಕ ಅವರು ಆಯ್ಕೆಗೊಂಡಿದ್ದಾರೆ.


ವಿದ್ಯಾರ್ಥಿ ವಿಭಾಗದಲ್ಲಿ ಅಂಬಿಕಾ ವಿದ್ಯಾಲಯದ ಅನರ್ಘ್ಯಶ್ರೀ, ವಿಟ್ಲ ಜೆಸೀಸ್ ಆಂಗ್ಲಮಾಧ್ಯಮದ ಮನಸ್ವಿ ಆರ್ ಕೆ, ಸೈಂಟ್ ಫಿಲೋಮಿನಾ ಕಾಲೇಜಿನ ಶ್ರೀವಿದ್ಯಾ ಎನ್(ಪ್ರ), ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಮಹಿಮಾ ಆರ್ ಕೆ, ರಾಮಕೃಷ್ಣ ಪ್ರೌಢಶಾಲೆಯ ಬೃಂದಾ ಆರ್ ಕೆ, ಅಂಬಿಕಾ ವಿದ್ಯಾಲಯದ ದೈವಿಕ್ ಶೆಟ್ಟಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಲ್ಪಾ ಎಸ್ ನಾಯಕ್(ದ್ವಿ), ಮಣಿಕ ಸರಕಾರಿ ಪ್ರೌಢಶಾಲೆಯ ನಿಖಿತ, ರಾಮಕೃಷ್ಣ ಪ್ರೌಢಶಾಲೆಯ ಮಾನ್ವಿ ಶೆಟ್ಟಿ, ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಯ ಆಪ್ತಿ ಎಸ್ ರೈ(ತೃ), ಪ್ರೋತ್ಸಾಹಕ ಬಹುಮಾನವಾಗಿ ಸವಣೂರು ಸರಕಾರಿ ಪ.ಪೂ ಕಾಲೇಜಿನ ದಿಶಾ, ಮಂಗಳೂರು ಎಂಎಪಿಎಸ್ ಕಾಲೇಜಿನ ದೀಪ್ತಿ ಕೆ.ಸಿ, ಅಂಬಿಕಾ ವಿದ್ಯಾಯದ ಆರ್ಯ ಮೋಹನ್ ಎಚ್, ಪೂರ್ವಿ ವಿ, ಸೈಂಟ್ ಫಿಲೋಮಿನಾ ಕಾಲೇಜಿನ ದೀಕ್ಷಾ ಕೆ.ಸಿ, ಸಿಂಸಾರುಲ್ ಹಕ್, ಬೊಬ್ಬೆಕೇರಿ ದ.ಕ.ಜಿ.ಪಂ ಹಿ.ಪ್ರ ಸಾಲೆಯ ನೇಷಾಶ್ರೀ ಎಸ್.ಕೆ, ಹರೇಕಳ ನ್ಯೂ ಪಾಡ್ಪು ಶಾಲೆಯ ಮಹಮ್ಮದ್ ಇಂದಾದ್, ಕಾಣಿಯೂರು ಬೊಬ್ಬೆಕೇರಿ ಶಾಲೆಯ ಅನಸ್, ಕಡಬ ಮೌಲನಾ ಅಜಾದ್ ಶಾಲೆಯ ಶಮಿಲ್, ರಾಮಕೃಷ್ಣ ಪ್ರೌಢಶಾಲೆಯ ಕೆ.ಅದಿತ್ಯ ಬಂಡಾರ್ಕರ್ ಅವರು ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here