







ಪುತ್ತೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಬಸ್ ಕಂಡಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.


ಖಾಸಗಿ ಸೆಲೆನಾ ಬಸ್‌ನ ಕಂಡಕ್ಟರ್, ಕಲ್ಲೇರಿಯ ಅಬುಸಾಲಿಯವರ ಮಗ, ಪ್ರಸ್ತುತ ಉಪ್ಪಿನಂಗಡಿ ಕರ್ವೆಲು ಅಬುಬಕ್ಕರ್ ರವರ ಮನೆಯಲ್ಲಿ ಬಾಡಿಗೆಯಲ್ಲಿರುವ ಇರ್ಫಾನ್ (32) ಬಂಧಿತ.



ಇರ್ಫಾನ್ ಜು.9ರಂದು ಸಂಜೆ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯ ಸನ್ನೆ ಮಾಡಿದ್ದಾನೆ. ಹಿಂದಿನ ಸೀಟಿಗೆ ಬಾ ಎಂದು ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಜು.10ರಂದು ದಸ್ತಗಿರಿ ಮಾಡಿ ತನಿಖೆ ನಡೆಸಲಾಗುತ್ತಿದೆ.










