






ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್, ಏರಿಯಾ ಎ ಇದರ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.೯ ರಂದು ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಸಂಜೆ ಜರಗಿತು.




ರಾಷ್ಟ್ರೀಯ, ಪ್ರಾಂತ್ಯ ಸಮ್ಮೇಳನದಲ್ಲಿ ಅವಾರ್ಡ್ ಪಡೆಯಲಿ-ಅಕ್ಷತಾ ಬಿ:
ಪದ ಪ್ರದಾನ ಅಧಿಕಾರಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯಾ ಎ ಇದರ ಉಪಾಧ್ಯಕ್ಷೆ ಅಕ್ಷತಾ ಬಿ.ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೊಸದಾಗಿ ಸೇರ್ಪಡೆಗೊಂಡ ಸದಸ್ಯರು ಅವರವರ ಕ್ಷೇತ್ರದಲ್ಲಿ ಪರಿಣತಿ ಪಡೆದುಕೊಂಡಿರುವುದು ಸಂಸ್ಥೆಗೆ ಹೆಗ್ಗಳಿಕೆಯಾಗಿದೆ. ಅತೀ ಶೀಘ್ರದಲ್ಲಿ ಈ ಘಟಕವು ರಾಷ್ಟ್ರೀಯ ಸಮ್ಮೇಳನದಲ್ಲಿ, ಪ್ರಾಂತ್ಯ ಸಮ್ಮೇಳನದಲ್ಲಿ ಅವಾರ್ಡ್‌ಗಳನ್ನು ಖಂಡಿತಾ ಪಡೆಯುತ್ತೀರಿ. ನಿರ್ಗಮಿತ ಅಧ್ಯಕ್ಷೆ ಮಲ್ಲಿಕಾ ರೈರವರ ತಂಡ ಉತ್ತಮ ಕಾರ್ಯಕ್ರಮಗಳನ್ನು ಮಾಡಿದೆ, ಅವನ್ನು ಪ್ರಚುರಪಡಿಸಬೇಕಿದೆ. ನೂತನ ಅಧ್ಯಕ್ಷೆ ಸುಮಂಗಲ ಶೆಣೈರವರ ತಂಡ ನೂರಾರು ಕನಸುಗಳನ್ನು ಹೊತ್ತು ಸಮಾಜಮುಖಿ ಸೇವೆಗೆ ಕಾರ್ಯೋನ್ಮುಖವಾಗಿದ್ದು ಅವರಿಗೆ ಶುಭ ಹಾರ‍್ಯಕೆಗಳು ಎಂದರು.



ಅಂತರ್ರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗುವುದು ಗೌರವದ ವಿಷಯ-ಉಮೇಶ್ ನಾಯಕ್:
ಮುಖ್ಯ ಅತಿಥಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಅಂತರ್ರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗುವುದು ಗೌರವದ ವಿಷಯವಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರು ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳಾಗಿದ್ದು ಘಟಕವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇದು ಸಹಕಾರಿಯಾಗಲಿದೆ. ೪೦ರ ಹರೆಯ ತನಕ ಜೇಸಿಐ, ಬಳಿಕ ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಇವುಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಿದೆ. ರಾಜಕೀಯ ರಹಿತವಾಗಿ ಸಮಾಜ ಸೇವೆಗೆ, ನಾಯಕತ್ವ ಹೊಂದುವತ್ತ ಇಲ್ಲಿ ಸೇವೆ ಮಾಡಲು ಅವಕಾಶವಿದೆ ಎಂದರು.
ನಮ್ಮನ್ನು ನಾವು ಬೆಳೆಸಿಕೊಳ್ಳೋಣ, ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳೋಣ-ಮಲ್ಲಿಕಾ ಜೆ.ರೈ:
ಕ್ಲಬ್ ನಿರ್ಗಮಿತ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಜೆ.ರೈ ಮಾತನಾಡಿ, ನೆಲ್ಯಾಡಿ ಲೀಜ್ಹನ್‌ರವರಿಂದ ಪುತ್ತೂರು ಭಾಗದಲ್ಲಿ ಈ ಸಂಸ್ಥೆ ಹುಟ್ಟು ಹಾಕಿದೆ. ಕಳೆದ ಎರಡು ವರ್ಷಗಳಲ್ಲಿ ತಮ್ಮಿಂದಾದಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಇಲ್ಲಿಯವರೆಗೆ ಬಂದು ನಿಂತಿದ್ದೇವೆ. ಮುಂದಿನ ದಿನಗಳಲ್ಲೂ ಸಂಸ್ಥೆಯು ಸಾಮಾಜಿಕ ಕಾರ್ಯಕ್ರಮಗಳತ್ತ ಚಿತ್ತ ಹರಿಸುತ್ತ ನಮ್ಮನ್ನು ನಾವು ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳೋಣ ಎಂದರು.
ಸದಸ್ಯರ ಸೇರ್ಪಡೆ:
ನೂತನ ಸದಸ್ಯರಾಗಿ ಈಶ್ವರ್ ಬೆಡೇಕರ್ ಸಾಮೆತ್ತಡ್ಕ, ಹೊನ್ನಪ್ಪ ಅಮ್ಮುಂಜ, ಅಶೋಕ್ ಬಲ್ನಾಡು, ಕರುಣಾಕರ್ ಪಾಂಗ್ಲಾಯಿ, ಮಂಜುನಾಥ ಎನ್.ಎಸ್, ಆನಂದ ರೈ, ಸೇಸಪ್ಪ ನಾಕ್ ಕುಂತೂರು, ಪ್ರವೀಣ್ ಆಚಾರ್ಯ ನರಿಮೊಗರು, ಶಾಂತ ಪುತ್ತೂರು, ಹರ್ಷಿತ್ ಹನುಮಾಜೆ, ರತ್ನಾ ನಾಯರ್, ಮೊಹಮದ್ ಅಶ್ರಫ್, ಸತೀಶ್ ನಾಕ್‌ರವರುಗಳನ್ನು ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ಪದ ಪ್ರದಾನ ಅಧಿಕಾರಿ ಅಕ್ಷತಾ ಬಿ.ರವರು ನೂತನ ಸದಸ್ಯರಿಗೆ ಪ್ರಮಾನವಚನ ಬೋಧಿಸಿದರು.
ನಿರ್ಗಮಿತ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಜೆ.ರೈ ಸ್ವಾಗತಿಸಿ, ನೂತನ ಕಾರ್ಯದರ್ಶಿ ಮಹಾಲಿಂಗ ನಾಯ್ಕ ವಂದಿಸಿದರು. ಪುರುಷೋತ್ತಮ ಶೆಟ್ಟಿ ಸೀನಿಯರ್ ಚೇಂಬರ್ ವಾಣಿ ವಾಚಿಸಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್ ನಿಕಟಪೂರ್ವ ಪ್ರಾಜೆಕ್ಟ್ ನಿರ್ದೇಶಕ ಚಂದ್ರಕಾಂತ್, ಪುರುಷೋತ್ತಮ ಶೆಟ್ಟಿ, ವತ್ಸಲ ನಾಯಕ್, ವೀಣಾ ಬಿ.ಕೆರವರು ಅತಿಥಿಗಳ, ನೂತನ ಪದಾಧಿಕಾರಿಗಳ ಪರಿಚಯ ಮಾಡಿದರು. ಉಷಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಪದ ಪ್ರದಾನ..
ನೂತನ ಅಧ್ಯಕ್ಷರಾಗಿ ಸುಮಂಗಲಾ ಶೆಣೈ, ಕಾರ್ಯದರ್ಶಿಯಾಗಿ ಮಹಾಲಿಂಗ ನಾಯ್ಕ ನರಿಮೊಗರು, ಕೋಶಾಧಿಕಾರಿಯಾಗಿ ರೋಹಿಣಿ ರಾಘವ ಆಚಾರ್ಯ, ನಿರ್ದೇಶಕರುಗಳಾಗಿ ಪುರುಷೋತ್ತಮ ಶೆಟ್ಟಿ, ಚಂದ್ರಕಾಂತ್, ವೀಣಾ ಬಿ.ಕೆ, ಹರಿಣಾಕ್ಷಿ ಜೆ.ಶೆಟ್ಟಿ, ಅನ್ನಪೂರ್ಣಮ್ಮರವರಿಗೆ ಪದ ಪ್ರದಾನ ಅಧಿಕಾರಿ ಅಕ್ಷತಾ ಬಿ.ರವರು ಪದ ಪ್ರದಾನವನ್ನು ನೆರವೇರಿಸಿದರು.
*ರಾಷ್ಟ್ರೀಯ, ಪ್ರಾಂತ್ಯ ಸಮ್ಮೇಳನದಲ್ಲಿ ಅವಾರ್ಡ್ ಪಡೆಯಲಿ-ಅಕ್ಷತಾ ಬಿ
*ಅಂತರ್ರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗುವುದು ಗೌರವದ ವಿಷಯ-ಉಮೇಶ್ ನಾಯಕ್
*ನಮ್ಮನ್ನು ನಾವು ಬೆಳೆಸಿಕೊಳ್ಳೋಣ, ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳೋಣ-ಮಲ್ಲಿಕಾ ಜೆ.ರೈ
ನನ್ನ ಅಧ್ಯಕ್ಷಾವಧಿಗೆ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಸಿಕ್ಕಿರುವುದು ನಿಜಕ್ಕೂ ಬಲ ಬಂದಂತಾಗಿದೆ. ಸಂಸ್ಥೆಯ ಸದಸ್ಯರ ಸಹಕಾರ ಹಾಗೂ ವಿಶ್ವಾಸದೊಂದಿಗೆ ಈ ಸಂಸ್ಥೆಯನ್ನು ಮುನ್ನೆಡೆಸುತ್ತೇನೆ ಎಂಬ ದೃಢ ನಿರ್ಧಾರ ನನ್ನ ಮನಸ್ಸಿನಲ್ಲಿದೆ. ಸಂಸ್ಥೆಯ ಸದಸ್ಯರೇ ಬೆನ್ನೆಲುಬಾಗಿದ್ದು ನಾವೆಲ್ಲಾ ಒಗ್ಗಟ್ಟಾಗಿ ಮುಂದುವರೆಯೋಣ, ನಾವು ಮಾಡುವ ಪ್ರತಿಯೊಂದು ಕಾರ್ಯವೂ ಸಮಾಜಕ್ಕೆ ಪರಿಚಯಿಸುವ ಮುಖೇನ ಇಂಪ್ಯಾಕ್ಟ್ ಮೂಡಿಸೋಣ.
-ಸುಮಂಗಲಾ ಶೆಣೈ, ನೂತನ ಅಧ್ಯಕ್ಷರು,
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜ್ಹನ್









