







ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾನಪನಾ ಪತ್ರಗಳನ್ನು ಜು.10ರಂದು ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾದಲ್ಲಿ ವಿತರಿಸಲಾಯಿತು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಅವರು ಕುಂಜೂರು ದೇವಸ್ಥಾನದ ಅಧ್ಯಕ್ಷ ಜಗನ್ನಾಥ ರೈ ಅವರಿಗೆ ಹಸ್ತಾಂತರಿಸಿ, ಪ್ರತಿ ಮನೆಯಿಂದ ಕನಿಷ್ಠ ರೂ.10ಸಾವಿರ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅನುರಾಧ ಕಲ್ಲೂರಾಯ, ರಾಧಾಕೃಷ್ಣ ಕಲ್ಲೂರಾಯ, ಐತ್ತಪ್ಪ ನಾಯ್ಕ, ಅಭಿಲಾಷ್ ಬಂಗಾರಡ್ಕ, ದಾಮೋಧರ ಗೌಡ, ರಕ್ಷಾ ಬಿ ಶೆಟ್ಟಿ, ಮಹಾಲಿಂಗೇಶ್ವರ ಭಕ್ತ ಸಮಿತಿ ಅಧ್ಯಕ್ಷ ರಾಮ ಭಟ್ ಮಚ್ಚಿಮಲೆ, ಚಂದ್ರಶೇಖರ ಸೂತ್ರಬೆಟ್ಟು, ಅಶೋಕ್ ಕುಂಜೂರು, ಡಾ.ಚಂದ್ರಶೇಖರ ಮಚ್ಚಿಮಲೆ, ವಿಶ್ವನಾಥ ಕುಲಾಲ್, ರಾಜೀವಿ ರಮೇಶ್ ಗೌಡ, ಕೇಶವ ಮಚ್ಚಿಮಲೆ, ಮಹಾಲಿಂಗ ನಾಯ್ಕ ಮಚ್ಚಿಮಲೆ, ಸೇಸಪ್ಪ ನಾಯ್ಕ ನೇಲ್ಯಡ್ಕ, ಉಮಾವತಿ ಪುರಂದರ ರೈ ಗೆಣಸಿನಕುಮೇರು, ವಸಂತಿ ಗೆಣಸಿನಕುಮೇರು, ಶೋಭಾಗಣೇಶ್ ರೈ, ನಯನಾ ರೈ, ಸವಿತಾ, ಪ್ರೇಮಲತಾ, ಆಶಾಲತಾ, ಪ್ರಮೀಳಾ ಸಹಿತ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.













