






ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು, ಕಡಬ ವಲಯದ ಭಜನಾ ಪರಿಷತ್ ಸಭೆ ಯೋಜನಾ ಕಚೇರಿಯಲ್ಲಿ ನಡೆಯಿತು. ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಒಗ್ಗು ಅಧ್ಯಕ್ಷತೆ ವಹಿಸಿದ್ದರು.


ಸಭೆಯಲ್ಲಿ ಕಡಬ ವಲಯದ ಭಜನಾ ಪರಿಷತ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.



ನೂತನ ಪದಾಧಿಕಾರಿಗಳು:
ಅಧ್ಯಕ್ಷೆ: ಶ್ರೀಮತಿ ಪ್ರೇಮ ವಿದ್ಯಾನಗರಉಪಾಧ್ಯಕ್ಷ: ಸುಂದರ ಗೌಡ ಪಿಜಕಳ
ಕಾರ್ಯದರ್ಶಿ: ಹರ್ಷಿಣಿ ಶಿವಕುಮಾರ್ ಪಟ್ನ
ಜೊತೆ ಕಾರ್ಯದರ್ಶಿ: ಶೇಖರ ಗೌಡ ಕೆದೊಟ್ಟು
ಕೋಶಾಧಿಕಾರಿ: ರಾಜು ಬೆದ್ರಾಜೆ
ಸದಸ್ಯರು: ವಿವಿಧ ಭಜನಾ ಮಂಡಳಿಯ ಸದಸ್ಯರು
ಭಜನಾ ಪರಿಷತ್‌ನ ಗೌರವ ಸಲಹೆಗಾರ ಸತ್ಯನಾರಾಯಣ ಹೆಗ್ಡೆ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ವಲಯ ಭಜನಾ ಪರಿಷತ್ ಗೌರವ ಅಧ್ಯಕ್ಷ ರಮೇಶ್ ಅಡಿಲ್, ವಿವಿಧ ಭಜನಾ ಮಂಡಳಿಯ ಸದಸ್ಯರು ಮತ್ತು ಸೇವಾ ಪ್ರತಿನಿಧಿಗಳಾದ ಸವಿತಾ, ಅಪರ್ಣ, ಸಂಧ್ಯಾ, ಜಯಲಕ್ಷ್ಮಿ, ಸರಿತಾ, ಸುಗುಣ ಉಪಸ್ಥಿತರಿದ್ದರು. ದುರ್ಗಾವತಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಗುಣ ಕಾರ್ಯಕ್ರಮ ನಿರೂಪಿಸಿದರು. ನಳಿನಿ ವಂದಿಸಿದರು.










