ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರ, ಯಕ್ಷಗಾನ ಕಲಾಕೂಟ

0

ಅಧ್ಯಕ್ಷ:ಕೇಶವ ಪಾಂಬಾರು, ಕಾರ್ಯದರ್ಶಿ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ, ಕೋಶಾಧಿಕಾರಿ:ಜಯತ್ ಕೆಮ್ಮಾರ

ಪುತ್ತೂರು :ಶ್ರೀ ಷಣ್ಮುಖದೇವ ಭಜನಾ ಮಂದಿರ ಮತ್ತು ಯಕ್ಷಗಾನ ಕಲಾಕೂಟ ಪೆರ್ಲಂಪಾಡಿ ಇದರ ಮಹಾಸಭೆಯು ಭಜನಾ ಮಂದಿರದ ಅಧ್ಯಕ್ಷರಾದ ಪ್ರವೀಣ್.ಜಿ.ಕೆ ಯವರ ಅಧ್ಯಕ್ಷತೆಯಲ್ಲಿ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೇಶವ ಪಾಂಬಾರು, ಕಾರ್ಯದರ್ಶಿಯಾಗಿ ವೆಂಕಟ್ರಮಣ ಆಚಾರ್ಯ,ಕೋಶಾಧಿಕಾರಿಯಾಗಿ ಜಯತ್ ಕೆಮ್ಮಾರ, ಉಪಾಧ್ಯಕ್ಷರಾಗಿ ಸುನಂದ ಲೋಕನಾಥ ಗೌಡ ಬಾಯಂಬಾಡಿ, ಜೊತೆ ಕಾರ್ಯದರ್ಶಿಯಾಗಿ ಗೀತಾಪ್ರಿಯ ಎಲ್.ರವರನ್ನು ಭಜನಾ ಮಂದಿರದ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿ ರವಿ ಕೊಂರ್ಬಡ್ಕರವರು ಹಿಂದಿನ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಮಾಜಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಕಾರ್ಯದರ್ಶಿ ಸತ್ಯಪ್ರಕಾಶ್ ಕುಂಟಿಕಾನ ಸ್ವಾಗತಿಸಿ, ಜಯತ್ ಕೆಮ್ಮಾರ ವಂದಿಸಿದರು.

LEAVE A REPLY

Please enter your comment!
Please enter your name here