ಮೂವಪ್ಪೆ- ಕಾಣಿಯೂರು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ

0

ಕಾಣಿಯೂರು: ಸಿ.ಎಂ.ಐ.ಡಿ.ಪಿ ಯೋಜನೆಯಡಿಲ್ಲಿ ರೂ 30 ಲಕ್ಷ ಅನುದಾನದಲ್ಲಿ ಮೂವಪ್ಪೆ- ಕಾಣಿಯೂರು ಸಂಪರ್ಕ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಾಸಕಿ ಭಾಗೀರಥಿ ‌ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಭಟ್, ಸುಳ್ಯ ಬಿಜೆಪಿ ರೈತ ಮೋರ್ಚಾ ಸಮಿತಿ ಉಪಾಧ್ಯಕ್ಷ ಲೋಹಿತ್ ಪೆರಿಯಾಣ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇ‍ಶಕಐತಪ್ಪ ರೈ ಅಜ್ರಂಗಳ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಚೇತನ್ ಕೊಡಿಯಾಲ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಉಪಾಧ್ಯಾಯ, ಕಾರ್ಯದರ್ಶಿ ಶೋಭಾ ಪೋಳಾಜೆ , ಬಿಎಲ್ ಒ ಕೋಮಲಾಕ್ಷಿ, ಕೊಡಿಯಾಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರ್ಷನ್ ಕೆ.ಟಿ, ಹಿರಿಯರಾದ ಚಿದಾನಂದ ಉಪಾಧ್ಯಾಯ ಕಲ್ಪಡ, ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಶಿವರಾಮ ಉಪಾಧ್ಯಾಯ, ಕಲ್ಪಡ ಉಳ್ಳಾಕುಲು ದೈವಸ್ಥಾನದ ಪರಿಚಾರಕರಾದ ಧನಂಜಯ ಕಲ್ಪಡ, ಯುವರಾಜ ಕೆ.ಪಿ ಕಲ್ಪಡ, ಲೋಕೇಶ್ ತಾಳಿತ್ತಡಿ, ಗಣೇಶ್ ಅಂಗಾರಡ್ಕ, ರಾಜೇಶ್ ಕಣಿಲೆಗುಂಡಿ, ಉಪೇಂದ್ರ ಗೌಡ ಕಣಿಲೆಗುಂಡಿ, ಧರ್ಮಪಾಲ ಕಲ್ಪಡ, ಕುಶಾಲಪ್ಪ ಗೌಡ ಪೋಳಾಜೆ, ಭಾಸ್ಕರ ಗೌಡ ಗುತ್ತು, ಬಾಲಕೃಷ್ಣ ಗೌಡ ಪೋಳಾಜೆ, ಕೇಶವ ಕೆ.ಪಿ ತೋಟ, ಕೊರಗಪ್ಪ ಕೆ.ಕೆ, ನವೀನ್ ಕೊಡೆಂಕಿರಿ, ಹರೀಶ್ ಆರ್ವಾರ, ಕುಕ್ಕಪ್ಪ ಗೌಡ ಕುಂಟಿನಿ, ಹೊನ್ನಪ್ಪ ಗೌಡ ಆರ್ವಾರ, ರಾಜೇಶ ಸಾರಕರೆ, ಉಮ್ಮಾರ್ ಮೂವಪ್ಪೆ, ಮಹಮ್ಮದ್ ಮೂವಪ್ಪೆ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here