ಶರವೂರು ದೇವಸ್ಥಾನದಲ್ಲಿ ತಾಳಮದ್ದಳೆ 34ನೇ ಸೇವೆ

0

ಆಲಂಕಾರು: ಶ್ರೀ ದುರ್ಗಾಂಬ ಕಲಾಸಂಗಮ ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ ೩೪ನೇ ಸೇವೆಯಾಗಿ ‘ರತಿ ಕಲ್ಯಾಣ’ ತಾಳಮದ್ದಳೆ ಜು.೧೧ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಮಣ್ಯ ರಾವ್ ಶರವೂರು ಬೆಂಗಳೂರು, ಡಿ.ಕೆ. ಆಚಾರ್ಯ ಹಳೆನೇರೆಂಕಿ, ಮೃದುಲ ಮುಕ್ಕ, ಶಿವರಂಜನ್ ಕಡಬ, ಚೆಂಡೆ ಮದ್ದಲೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಶಿಕಿನ್ ಶರ್ಮಾ ಶರವೂರು ಬೆಂಗಳೂರು, ಮೋಹನ ಶರವೂರು, ಸುರೇಂದ್ರ ಕಳಸ, ಕೃಪಾಕರ ಮುಕ್ಕ ಸಹಕರಿಸಿದರು. ಮುಮ್ಮೇಳದಲ್ಲಿ ರಾಘವೇಂದ್ರ ಭಟ್ ತೋಟಂತಿಲ (ಕೃಷ್ಣ 1), ದಿವಾಕರ ಆಚಾರ್ಯ ಹಳೆನೇರೆಂಕಿ (ದ್ರೌಪದಿ), ಕೇಶವ ಭಟ್ ಕೇಕಣಾಜೆ (ಕಮಲಭೂಪ ), ರಾಮ್‌ಪ್ರಸಾದ್ ಆಲಂಕಾರು (ರತಿ ಮತ್ತು ಕೃಷ್ಣ 2), ಶಂಕರ್ ನೆಲ್ಯಾಡಿ (ಅರ್ಜುನ ), ರಾಮ್ ಪ್ರಕಾಶ್ ಕೊಡಂಗೆ (ಭೀಮ ಮತ್ತು ಮೇಘಾಸುರ) ಸಹಕರಿಸಿದರು. ರಕ್ಷಿತ್ ರಾಜ್ ಹಾಗೂ ಮನೆಯವರು ಕೊರಂಬಾಡಿ, ಶರಣ್ಯಾ ರಾವ್ ಶರವೂರು ಸೇವಾರ್ಥಿಗಳಾಗಿದ್ದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು. ದೇವಸ್ಥಾನದ ಸಿಬ್ಬಂದಿಗಳು, ಕಲಾಭಿಮಾನಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here