







ಪುತ್ತೂರು: ಪುತ್ತೂರು ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಡಿ ಹಾಗೂ ಶಿಕ್ಷಕರ ತಂಡ ಪ್ರಥಮವಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರನ್ನು ಜು.13ರಂದು ಭೇಟಿ ಮಾಡಿ ಗೌರವಿಸಿ ತಾಲೂಕಿನ ಶೈಕ್ಷಣಿಕ ಬೇಕು ಬೇಡಿಕೆಗಳಿಗೆ ಸ್ಪಂದಿಸುವಂತೆ ವಿನಂತಿಸಿ ಸಹಕರಿಸುವಂತೆ ಮನವಿ ಮಾಡಲಾಯಿತು.


ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಷ್ಣುಪ್ರಸಾದ್, ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಸಿಲ್ವಿಯ ಎ.ಆರ್ ಕ್ಯಾಸ್ಟೆಲಿನೊ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್ ಎ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರ ಸಂಘದ ಅಧ್ಯಕ್ಷರು ಮಾಮಚ್ಚನ್ ಎಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶ್ರಫ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಮುಂತಾದವರು ಉಪಸ್ಥಿತರಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೂತನ ಇಲಾಖೆ ವಾಹನವನ್ನು ಒದಗಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಹಾಗೂ ಶಿಥಿಲಾವಸ್ಥೆಯಲ್ಲಿರುವ ಗುರುಭವನದ ಕಟ್ಟಡದ ಬದಲು ಅದೇ ಸ್ಥಳದಲ್ಲಿ ತಾಲೂಕಿನ ಸಮಸ್ತ ಶಿಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ಸುಸಜ್ಜಿತವಾದ ಹೊಸ ಗುರುಭವನ ಕಟ್ಟಡವನ್ನು ಕಟ್ಟಲು ಅನುದಾನವನ್ನು ಒದಗಿಸುವಂತೆ ಶಾಸಕರಲ್ಲಿ ವಿನಂತಿಸಲಾಯಿತು. ಎರಡು ಬೇಡಿಕೆಗಳಿಗೂ ಶಾಸಕರು ಸಹಮತವನ್ನು ವ್ಯಕ್ತಪಡಿಸಿ ನೂತನ ಕಟ್ಟಡಕ್ಕೆ ಬೇಕಾದ ನೀಲ ನಕ್ಷೆ ಮಾಡಿಕೊಡುವಂತೆ ತಿಳಿಸಿದರು.













