







ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕರಸೇವಾ ಪ್ರಮುಖ್ ಇಂಜಿನಿಯರ್ ಬೊಳುವಾರು ನಿವಾಸಿ ರಾಮಚಂದ್ರ ಘಾಟೆ (53ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.14 ರಂದು ನಿಧನರಾದರು.


ಮೂಲತಃ ಇರ್ದೆ ಬೆಟ್ಟಂಪಾಡಿ ಗ್ರಾಮದ ದೂಮಡ್ಕ ನಿವಾಸಿಯಾಗಿರುವ ರಾಮಚಂದ್ರ ಘಾಟೆ ಅವರು ಪುತ್ತೂರಿನ ಬೊಳುವಾರಿನಲ್ಲಿ ವಾಸ್ತವ್ಯ ಹೊಂದಿದ್ದರು. ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿದ್ದು ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರದ ಪ್ರಾರಂಭಗೊಂಡ 2012 ರ ಸಮಯದಲ್ಕಿ ಬ್ರಹ್ಮಕಲಶೋತ್ಸವದ ತನಕ ನಿತ್ಯ ಕರಸೇವಕರೊಂದಿಗೆ ದೇವಳದ ವಿವಿಧ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.



ಇತ್ತೀಚೆಗೆ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾದ ಅವರು ಅಲ್ಲಿ ನಿಧನರಾದರು. ಮೃತರು ಪತ್ನಿ ರಜನಿ, ಪುತ್ರಿ ಮೇಧಾ, ತಾಯಿ ರಾಧಾ, ಸಹೋದರರಾದ ನಾಗರಾಜ್, ಗೋಪಾಲಕೃಷ್ಣ, ಪ್ರಕಾಶ್ ಘಾಟೆ ಮತ್ತು ಐವರು ಸಹೋದರಿಯರನ್ನು ಅಗಲಿದ್ದಾರೆ.
ನಾಳೆ ಜು.15 ಕ್ಕೆ ಅಂತ್ಯ ಸಂಸ್ಕಾರ:
ರಾಮಚಂದ್ರ ಘಾಟೆಯವರ ಮೃತ ದೇಹವನ್ನು ಜು.15ರ ಬೆಳಿಗ್ಗೆ ಬೊಳುವಾರಿನ ಅವರ ಮನೆಗೆ ತಂದು ಮುಂದಿನ ಅಂತಿಮಕಾರ್ಯ ನಡೆಯಲಿದೆ ಎಂದು ಅವರ ಆಪ್ತವಲಯದಿಂದ ಮಾಹಿತಿ ಲಭ್ಯವಾಗಿದೆ.










