






ಪುತ್ತೂರು: ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಇದರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜು.14 ರಂದು ಮಾಣಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.


ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳಿಂದ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ,ಶಿಕ್ಷಣ ಇಲಾಖೆಯ ಪ್ರತಿನಿಧಿ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರಿನ ಪ್ರತಿನಿಧಿಗಳಾದ ಪ್ರೇಮಿ ಫೆರ್ನಾಂಡೀಸ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಅದ್ಯಕ್ಷರಾದ ಸುಮಂಗಲಾ ಶೆಣೈ ಕೋಶಾಧಿಕಾರಿ ರೋಹಿಣಿ ರಾಘವ ಆಚಾರ್ಯ, ಸದಸ್ಯರಾದ ರತ್ನಾ ನಾಯರ್ ಹಾಜರಿದ್ದು ವಿವಿದ ಹಣ್ಣುಗಳ ಗಿಡಗಳನ್ನು ಮಕ್ಕಳೊಂದಿಗೆ ನೆಟ್ಟು ಗಿಡವನ್ನ ಯಾವ ರೀತಿ ಪೋಷಣೆ ಮಾಡಬೇಕು ಎಂದು ಮಾಹಿತಿ ನೀಡಿದರು.



ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಾವತಿ ಹಾಗೂ ಶಿಕ್ಷಕ ವರ್ಗದವರು ಹಾಗೂ ಮಕ್ಕಳ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.










