






ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆ ಶಿವಛತ್ರಪತಿ ಮರಾಠ ಗಣೇಶೋತ್ಸವ ಮಂಡಳ್ ಇದರ ವತಿಯಿಂದ 10 ವರ್ಷದ ಗಣೇಶೋತ್ಸವಕ್ಕೆ ವಿಗ್ರಹ ರಚನೆ ಮುಹೂರ್ತ ಕಾರ್ಯಕ್ರಮವು ಜು.17 ರ ಬೆಳಿಗ್ಗೆ 11 ಕ್ಕೆ ಪರ್ಲಡ್ಕ ಏಕದಂತ ಆರ್ಟ್ಸ್ ಇಲ್ಲಿ ತಾರಾನಾಥ್ ಆಚಾರ್ಯ ಇವರ ನೇತೃತ್ವದಲ್ಲಿ ನೆರವೇರಿತು.


ಧಾರ್ಮಿಕ ಪೂಜಾ ಕೈಂಕರ್ಯ ಮೂಲಕ ಗಣಪನ ವಿಗ್ರಹ ರಚನೆಗೆ ಚಾಲನೆ ನೀಡಲಾಯಿತು. ಶಿವಛತ್ರಪತಿ ಮರಾಠ ಮಂಡಳ್ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಾಜಿ ಮಾರುತಿ ಸುರ್ವೆ, ಖಜಾಂಚಿ ಸುಜಿತ್ ಪವಾರ್, ಸಿದ್ಧನಾಥ್ ಖಂದಾರೆ, ಮಾಧವ್ ಗೊಡ್ಕೆ, ಅದಿಕ್ ಕದಮ್, ಅಜಿತ್ ಸುರ್ವೆ, ಸಂಬಾಜೆ ಸುರ್ವೆ, ಚಂದ್ರಕಾಂತ್ ಜಾಧವ್, ಸಹದೇವ್ ಖಂದಾರೆ, ದೀಪಕ್ ಖಂದಾರೆ, ಮಾರುತಿ ಕದಮ್, ಚಂದ್ರಕಾಂತ್ ಕರಂಡೆ,ಅಮಿತ್ ಕುಂಬಾರ್, ವಿಕಾಸ್ ಪಾಟೀಲ್, ಪಾಂಡುರಂಗ ಕುಂಬಾರ್ ಸಹಿತ ಸಮಿತಿ ಸದಸ್ಯರೆಲ್ಲರೂ ಇದ್ದರು.













