






ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ, ಶ್ರೀರಾಮ ಶಾಲೆ ವೇದಶಂಕರನಗರ ಹಾಗೂ ಉಪ್ಪಿನಂಗಡಿ ಹಿಂದಿ ವಿಭಾಗ ಇವುಗಳ ಸಹಯೋಗದಲ್ಲಿ ಸಂತ ರವಿದಾಸರ 650ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಭಾರತೀಯ ಸಂತ ಪರಂಪರೆ ಉಪನ್ಯಾಸ ಮಾಲಿಕೆ- 9 ಕಾರ್ಯಕ್ರಮವು ಜು.17ರಂದು ಶ್ರೀರಾಮ ಶಾಲೆ ವೇದಶಂಕರನಗರದಲ್ಲಿ ಆಯೋಜಿಸಲಾಯಿತು.



ಶಾಲಾ ಸಂಚಾಲಕರಾದ ಯು. ಜಿ ರಾಧಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕಾರರಾದ ಬಿ.ಕೆ ಕುಮಾರ್ ಅವರು ಸಂತ ರವಿದಾಸರ ಜೀವನ ಚರಿತ್ರೆ, ವಚನಗಳು ಮತ್ತು ಸಂದೇಶಗಳು ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರೇರಣೆ ನೀಡುತ್ತವೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮ ಸಂಯೋಜಕರಾದ ಡಾಕ್ಟರ್ ಪ್ರಮೋದ್ ಎಂ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.




ವೇದಿಕೆಯಲ್ಲಿ ಕೆ ಆರ್ ಎಂ ಎಸ್ ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಡಾಕ್ಟರ್ ಮಾಧವ, ಜಿಲ್ಲಾ ಕಾರ್ಯದರ್ಶಿ ಪ್ರಮೋದ್, ಶ್ರೀರಾಮ ಶಾಲೆಯ ಹಿಂದಿ ಭಾಷಾ ವಿಷಯ ಬೋಧಕ ಪೂವಪ್ಪ ಮೂಲ್ಯ, ಶಾಲಾ ಪ್ರಾಥಮಿಕ ವಿಭಾಗದ ಪ್ರಭಾರ ಮುಖ್ಯ ಗುರು ಉಷಾ ಮಾತಾಜಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ವಂದಿತ ಮತ್ತು ಹರ್ಷಿತ ಪ್ರಾರ್ಥಿಸಿದರು. ಸಾನಿಕಾ ಸ್ವಾಗತಿಸಿ, ಚಿನ್ಮಯಿ ಜೋಗಿ ವಂದಿಸಿದರು. ಅಂಶಿಕ ಮತ್ತು ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.










