






ರಾಮಕುಂಜ: ಕಡಬ ತಾಲೂಕಿನ ಕೊೖಲದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜು.22ರಂದು ರೈತರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಯುವಕರು ಹಾಗೂ ಜಾನುವಾರು ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ದಿನದ ‘ಆಧುನಿಕ ಹೈನುಗಾರಿಕೆ-ಸುಸ್ಥಿರ ಹಾಲು ಉತ್ಪಾದನೆ’ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.


ಈ ತರಬೇತಿ ಕಾರ್ಯಕ್ರಮದಲ್ಲಿ ಹೈನು ರಾಸುಗಳ ನಿರ್ವಹಣೆ, ತಳಿ ಆಯ್ಕೆ, ವೈಜ್ಞಾನಿಕ ವಸತಿ, ಸಮತೋಲಿತ ಆಹಾರ ಹಾಗೂ ಆರೋಗ್ಯ ನಿರ್ವಹಣೆ ಕುರಿತಂತೆ ಹಲವಾರು ಉತ್ತಮ ಉತ್ಪಾದಕತೆ ಮತ್ತು ಲಾಭದಾಯಕ ಹೈನುಗಾರಿಕೆಗಾಗಿ ವೈಜ್ಞಾನಿಕ ಸಲಹೆಗಳನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಮುಂಗಡವಾಗಿ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು. ತರಬೇತಿಗೆ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ.ಹರಿಣಿ ಕೆ.ಆರ್.ಸಹಾಯಕ ಪ್ರಾಧ್ಯಾಪಕರು. ಮೊ.ಸಂ.9119094062 ಅಥವಾ ಡಾ.ರಶ್ಮಿ ಕೆ.ಎಂ.ಸಹಾಯಕ ಪ್ರಾಧ್ಯಾಪಕರು ಮೊ.ಸಂ.8431831841ಗೆ ಸಂಪರ್ಕಿಸುವಂತೆ ಕಾಲೇಜಿನ ಡೀನ್ ಎಂ.ಸಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













