






ರಾಮಕುಂಜ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೀಟ್-2026ರಲ್ಲಿ ಕಡಬ ತಾಲೂಕಿನ ಕುಂತೂರು ಗ್ರಾಮದ ಕೆದ್ದೋಟೆಯ ವಾಸವಿ ಕೆ.ಸಿ.ಗೌಡ ಅವರು 99.8214406 ಪರ್ಸೆಂಟೈಲ್ ಅಂಕಗಳೊಂದಿಗೆ 3494 ಆಲ್ ಇಂಡಿಯಾ ರ್ಯಾಂಕ್ ಹಾಗೂ ಜನರಲ್ ಕೆಟಗರಿಯಲ್ಲಿ 1702 ರ್ಯಾಂಕ್ನೊಂದಿಗೆ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.



ಇವರು ಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್ನಲ್ಲಿ 4285, ಬಿ.ಫಾರ್ಮಾ 1073, ಬಿ.ಪಿ.ಟಿ. 265, ನರ್ಸಿಂಗ್ 721, ನ್ಯಾಚುರೋಪತಿ 322 ಹಾಗೂ ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ 1060ನೇ ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ. ಜೆಇಇ(ಮೈನ್ಸ್) ರಾಷ್ಟ್ರೀಯ ಪರೀಕ್ಷೆಯಲ್ಲಿ 97.68 ಪರ್ಸೆಂಟೈಲ್ ಅಂಕಗಳನ್ನು ಗಳಿಸಿರುತ್ತಾರೆ. ವಿಜ್ಞಾನ ಸಂಶೋಧನಾ ವಿಭಾಗಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪ್ರತಿಷ್ಠಿತ ಎನ್ಇಎಸ್ಟಿ ಪರೀಕ್ಷೆಯಲ್ಲಿ 901ನೇ ರ್ಯಾಂಕ್ ಹಾಗೂ ಐಸಾರ್ ಪರೀಕ್ಷೆಯಲ್ಲಿ 1441ನೇ ರ್ಯಾಂಕ್ ಪಡೆದಿದ್ದಾರೆ. ಕಾಮೆಡ್-ಕೆ ಪರೀಕ್ಷೆಯಲ್ಲಿ 4824(95.85) ರ್ಯಾಂಕ್ ಪಡೆದಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2026ರಲ್ಲಿ 593 (ಶೇ.98.83) ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿದ್ದರು. ಕಲ್ಲಡ್ಕದ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರೈಸಿರುವ ವಾಸವಿ ಕೆ.ಸಿ.ಗೌಡ ಅವರು ಕಡಬ ತಾಲೂಕಿನ ಕುಂತೂರು ಗ್ರಾಮದ ಕೆದ್ದೋಟೆ ನಿವಾಸಿ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆದ್ದೋಟೆ ಮತ್ತು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಗಣಿತ ಶಿಕ್ಷಕಿ ಸೌಮ್ಯ ದಂಪತಿಯ ಪುತ್ರಿ.












