ಸಂತ ವಿಕ್ಟರನ ಆ.ಮಾ. ಶಾಲಾ ರಕ್ಷಕ ಶಿಕ್ಷಕ ಸಂಘದ ಸಭೆ : ಉಪಾಧ್ಯಕ್ಷರಾಗಿ ರಶ್ಮಿ ರಾಜೇಶ್ ಆಯ್ಕೆ

0

ಪುತ್ತೂರು: ಸಂತ ವಿಕ್ವರನ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಶಾಲಾ ಸಂಚಾಲಕರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ ಸಂಚಾಲಕ ವಂ|ಡಾ|ಜೆ.ಬಿ ಸಲ್ದಾನರವರು ಮಾತನಾಡಿ ಹೆತ್ತವರು ಮತ್ತು ಶಿಕ್ಷಕರು ಯಾವ ರೀತಿ ಮಕ್ಕಳನ್ನು ಬೆಳೆಸಬೇಕೆಂದು ತಿಳಿಸಿದರು. ಮಕ್ಕಳಲ್ಲಿ ಸಂಸ್ಕಾರ ಪ್ರೀತಿ ಮತ್ತು ಗುಣನಡತೆಗಳನ್ನು ಹೆತ್ತವರು ಕಲಿಸಬೇಕೆಂದು ತಿಳಿಸಿ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡಿದರು.

ಕಾರ್ಯಕಾರಿ ಸಂಘದ ಸಮಿತಿಯ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು. 2026-27ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ರಶ್ಮಿ ರಾಜೇಶ್ ಶೆಟ್ಟಿರವರನ್ನು ಆಯ್ಕೆ ಮಾಡಲಾಯಿತು. ಶಿಕ್ಷಕಿಯರಾದ ಗೀತಾ ಲೋಬೋ ಸ್ವಾಗತಿಸಿ ಕುಮುದಾಕ್ಷಿ ವಂದಿಸಿದರು. ಲೀನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here