







ಉಪ್ಪಿನಂಗಡಿ: ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟೈಯರ್ ಅಸೋಸಿಯೇಶನ್‌ನ ವತಿಯಿಂದ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭ ಅಸೋಸಿಯೇಶನ್‌ನ ಅಧ್ಯಕ್ಷ ವಿಲಾಸ್ ಕುಮಾರ್, ಸಲಹೆಗಾರ ರತ್ನಾಕರ ಪೈ, ಖಜಾಂಚಿ ಲಕ್ಷ್ಮೀನಾರಾಯಣ ನಾಯಕ್, ವ್ಯವಸ್ಥಾಪಕ ರಾಮದಾಸ್, ಸದಸ್ಯ ಕೇಶವ, ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಪ್ರೌಢಶಾಲಾ ವಿಭಾಗದ ಮುಖ್ಯಗುರು ದೇವಕಿ, ಎಸ್‌ಡಿಎಂಸಿ ಅಧ್ಯಕ್ಷೆ ಗುಣವತಿ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಜಯಕುಮಾರ್ ಪೂಜಾರಿ, ಸಿದ್ದೀಕ್, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಸದಸ್ಯರಾದ ಅನಿ ಮಿನೇಜಸ್, ವೆಂಕಪ್ಪ ಪೂಜಾರಿ, ನಾಗೇಶ್ ಪ್ರಭು, ಆದಂ ಕೊಪ್ಪಳ, ಮಜೀದ್ ಮಠ, ಡಾ. ನಿರಂಜನ್ ರೈ, ಜಾನ್ ಕೆನ್ಯೂಟ್, ಕಾಲೇಜು ಪ್ರಾಂಶುಪಾಲ ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.













