







ಪುತ್ತೂರು: ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಸಂಪ್ರೀತ್ ಡಿ ಇವರು, ಸಿ ಬಿ ಎಸ್ ಇ -ll ಬೋರ್ಡ್ 10ನೇ ತರಗತಿಗೆ ನಡೆಸಿದ, 2025-26 ನೇ ಹೆಚ್ಚುವರಿ ಅಂಕ ಗಳಿಕೆಯ ಪರೀಕ್ಷೆಯಲ್ಲಿ, ತಮ್ಮ ಹಿಂದಿನ 90.8% ಅಂಕದ ಬದಲು 94.4% ಅಂಕವನ್ನು ಗಳಿಸುವುದರೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿರುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ. ಇವರು ದೇವಸ್ಯದ ನಿವೃತ್ತ ಸೈನಿಕ ವಸಂತ ಗೌಡ ಮತ್ತು ಶಿಕ್ಷಕಿ ಕವಿತಾ. ಕೆ ದಂಪತಿ ಪುತ್ರ.












