ಕಡಬ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ರಾಜೇಶ್ವರಿ ಸುಬ್ರಹ್ಮಣ್ಯ ಪ್ರಾ.ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ

0

ಕಡಬ: ಕಳೆದ 16 ವರ್ಷಗಳಿಂದ ಕಡಬ ಸಮುದಾಯ ಆರೋಗ್ಯ ಕೇಂದ್ರದ ಕುಟ್ರುಪಾಡಿ ಆರೋಗ್ಯ ಉಪಕೇಂದ್ರದ ಆಗೋಗ್ಯ ಸುರಕ್ಷಾಧಿಕಾರಿ ರಾಜೇಶ್ವರಿ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳ್ಪ ಉಪಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.


ರಾಜೇಶ್ವರಿ ಅವರು, 2006ರಲ್ಲಿ ಮೈಸೂರಿನ ಆರೋಗ್ಯ ಕೇಂದ್ರದಲ್ಲಿ ಸೇವೆಗೆ ನೇಮಕಾತಿಯಾಗಿ 2010ರಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಕುಟ್ರುಪಾಡಿ ಉಪಕೇಂದ್ರಕ್ಕೆ ಕರ್ತವ್ಯಕ್ಕೆ ಸೇರಿದ್ದರು.ಸುದೀರ್ಘ 16 ವರ್ಷಗಳ ಸೇವಾ ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ, ತಾಯಿ-ಮಗು ಆರೈಕೆ, ಲಸಿಕಾ ಕಾರ್ಯಕ್ರಮಗಳು ಹಾಗೂ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

LEAVE A REPLY

Please enter your comment!
Please enter your name here