ಕೆಮ್ಮಾಯಿಯಲ್ಲಿ ಬಸ್ಸಿನಿಂದ ಬಿದ್ದು ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಕೆ.ಎಸ್.ಆರ್.ಟಿ.ಸಿಯಿಂದ ರೂ. 3ಲಕ್ಷ ಪರಿಹಾರ ಧನ

0

ಪುತ್ತೂರು: ಕೆಮ್ಮಾಯಿ ಬಳಿ ಚಲಿಸುತ್ತಿದ್ದ ಬಸ್‌ನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಸೋಮಪ್ಪ ಅವರ ಕುಟುಂಬಕ್ಕೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ನಿಗಮದಿಂದ ರೂ. 3ಲಕ್ಷ ಪರಿಹಾರ ಧನ ವಿತರಿಸಲಾಯಿತು.


2022ರ ಡಿ.5ರಂದು ಬಿಸಿರೋಡ್ ಘಟಕದ ಕೆಎಸ್‌ಆರ್‌ಟಿಸಿ ಬಸ್ ಪುತ್ತೂರು ಉಪ್ಪಿನಂಗಡಿ ಮಾರ್ಗದ ಕಾರ್ಯಾಚರಣೆಯಲ್ಲಿದ್ದ ಸಮಯ ಕೆಮ್ಮಾಯಿ ಬಳಿ ಬಸ್ ಚಲಿಸುತ್ತಿದ್ದಾಗ ಪ್ರಯಾಣಿಕ ಕೆದಿಲ ಮುದ್ರಾಜೆ ನಿವಾಸಿ ಸೋಮಪ್ಪ(52ವ) ಎಂಬವರು ಬಸ್‌ನ ಹಿಂದಿನ ಬಾಗಿಲಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದರು.

ಮೃತ ಸೋಮಪ್ಪ ಅವರ ಕುಟುಂಬಕ್ಕೆ ನಿಗಮದಿಂದ ಸಂಸ್ಥೆಯ ನಿಯಮಾವಳಿಯಂತೆ ಪರಿಹಾರ ರೂಪಾವಾಗಿ ರೂ. 3ಲಕ್ಷ ಅನ್ನು ಚೆಕ್ ಮೂಲಕ ಸೋಮಪ್ಪ ಅವರ ಪತ್ನಿ ಸುನಿತಾ ಅವರಿಗೆ ನೀಡಲಾಯಿತು. ಸಂಸ್ಥೆಯ ವಿಭಾಗೀಯ ಸಂಚಲನಾಧಿಕಾರಿ ಎಂ.ಬಿ ಜೈಶಾಂತ್ ಕುಮಾರ್ ಚೆಕ್ ಹಸ್ತಾಂತರಿಸಿರು. ಈ ಸಂದರ್ಭ ಕೆಎಸ್‌ಆರ್‌ಟಿಸಿ ಸಂಚಾರ ಶಾಖೆ ಪುತ್ತೂರು ವಿಭಾಗದ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here