ಕಡಬ-ಅಡ್ಡಗದ್ದೆಯಲ್ಲಿ ಗುಡ್ಡ ಕುಸಿತ

0

ಕಡಬ: ಮಳೆಯಿಂದಾಗಿ ಗುಡ್ಡವೊಂದು ಕುಸಿದ ಘಟನೆ ಕಡಬ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಾಲೇಜು ರಸ್ತೆಯ ಅಡ್ಡಗದ್ದೆ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ಗುಡ್ಡದ ಮೇಲಿದ್ದ ಬಾಡಿಗೆ ಮನೆಯೊಂದರ ಶೌಚಾಲಯದ ಗುಂಡಿಯೂ ಕುಸಿದಿರುವುದಾಗಿ ವರದಿಯಾಗಿದೆ.

ಅಡ್ಡಗದ್ದೆಯಲ್ಲಿ ಜೋಸೆಫ್ ಎಂಬವರಿಗೆ ಸೇರಿದ ಈ ಕಟ್ಟಡದಲ್ಲಿ ಮೂರು ಬಾಡಿಗೆ ಮನೆಗಳಿದ್ದು, ಅಪಾಯಕಾರಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಆಡಳಿತದ ಸೂಚನೆ ಮೇರೆಗೆ ಬಾಡಿಗೆ ಮನೆಯವರು ಬೇರೆ ಕಡೆಗೆ ಸ್ಥಳಾಂತರವಾಗಿದ್ದರು. ಕಳೆದ ಎರಡ್ಮೂರು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಗುಡ್ಡ ಕುಸಿತಗೊಂಡಿದ್ದು ಇದರ ಜೊತೆಗೆ ಬಾಡಿಗೆ ಮನೆಯೊಂದರ ಶೌಚಾಲಯದ ಗುಂಡಿಯೂ ಕುಸಿದಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮ್ಮನಾ ಜಬೀನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here