1 ವಾರದಲ್ಲಿ 3 ಘಟನೆಗಳಿಗೆ ಸಂಬಂಧಿಸಿ 3 ಕುಟುಂಬಗಳಿಗೆ ರೂ.25 ಲಕ್ಷ ಪರಿಹಾರ ಆದೇಶ ಪತ್ರ ವಿತರಣೆ

0

ಸರಕಾರದ ಮಟ್ಟದಲ್ಲಿ ಪರಿಹಾರ – ಅಶೋಕ್ ಕುಮಾರ್ ರೈ

ಪುತ್ತೂರು: ಪುತ್ತೂರು ಮತ್ತು ಬಂಟ್ವಾಳ ಹಾಗು ಸುಳ್ಯ ವಿಧಾನಕ್ಷೇತ್ರಕ್ಕೆ ಸಂಬಂಧಿಸಿ 1 ವಾರದಲ್ಲಿ ನಡೆದ 3 ಘಟನೆಗಳಿಗೆ ಸಂಬಂಧಿಸಿ 3 ಕುಟುಂಬಗಳಿಗೆ ರೂ.25 ಲಕ್ಷ ಪರಿಹಾರದ ಆದೇಶ ಪತ್ರ ವಿತರಣೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ವಿತರಿಸಿದರು.


ಮುರುಳ್ಯ ಗ್ರಾಮದ ಕಡೀರದಲ್ಲಿ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತಪಟ್ಡ ಹಿನ್ನಲೆಯಲ್ಲಿ ಅವರ ಪೋಷಕರಾದ ವಸಂತ ಮತ್ತು ದಿವ್ಯ ದಂಪತಿಗೆ ತಲಾ 5 ಲಕ್ಷ ಮೊತ್ತದ ಪರಿಹಾರದ ಆದೇಶ ಪತ್ರವನ್ನು ಶಾಸಕ ಅಶೋಕ್ ರೈ ಅವರು ತಮ್ಮ ನಿವಾಸದಲ್ಲಿ ವಿತರಿಸಿದರು. ಆ ಬಳಿಕ ಇತ್ತಿಚೆಗೆ ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲಿ ಕೊಲೆಗೀಡಾದ ಲಾವಣ್ಯ ಅವರ ಮನೆಗೆ ತೆರಳಿ ರೂ.10 ಲಕ್ಷ ಪರಿಹಾರದ ಆದೇಶ ಪತ್ರ ಮತ್ತು ಶಾಲಾ ವಾಹನದ ಮೇಲೆ ಮರ ಬಿದ್ದು ಮೃತಪಟ್ಟ ಪೆರ್ನೆಯ ಬಾಲಕಿ ಮನೆಗೂ ತೆರಳಿ ಮನೆಯವರಿಗೆ ರೂ.5 ಲಕ್ಷದ ಪರಿಹಾರ ಆದೇಶ ಪತ್ರವನ್ನು ನೀಡಿದರು.

ಈ ಸಂದರ್ಭ ಪಂಚ ಗ್ಯಾರೆಂಟಿ ಯೋಜನೆ ತಾಲೂಕು‌ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಪ್, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಡಾ ರಾಜಾರಾಮ್, ಜಯಪ್ರಕಾಶ್ ಬದಿನಾರು, ಬಂಟ್ವಾಳ ಕಾಂಗ್ರೆಸ್ ನ ಮುಖಂಡರಾದ ಅಬ್ದುಲ್ ರಹಿಮಾನ್, ಸಂಜೀವ, ಮಾಯಿಪಲಪ್ಪ ಪೆರ್ನೆಯಲ್ಲಿ ವಿಟ್ಲ ಕಂದಸಯಾಧಿಕಾರಿ ಎಂ ಎನ್ ರವಿ, ಗ್ರಾಮಾ ಆಡಳಿತಾಧಿಕಾರಿ ಮನೋಹರ್, ಉಮೇಶ್, ಸುನಿಲ್ ಕುಮಾರ್, ಅಬ್ದುಲ್ ಶಾಪಿ, ಪಿಂಡೊ, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here