






ಪುತ್ತೂರು: ಸಂಟ್ಯಾರ್ ಜಂಕ್ಷನ್ನಲ್ಲಿ ಕಳೆದ 7 ವರ್ಷಗಳಿಂದ ಕಬ್ಬಿನ ಜ್ಯೂಸ್ ಮಾರಾಟ ಮಾಡುತ್ತಿದ್ದ ಜತ್ತಪ್ಪ ಗೌಡ ಅವರ ಕೈ ಕಬ್ಬಿನ ಜ್ಯೂಸ್ ಯಂತ್ರದ ಒಳಗೆ ಸಿಲುಕಿ 5 ಬೆರಳುಗಳನ್ನು ಕಳೆದುಕೊಂಡಿದ್ದಾರೆ.


ಅಪಘಾತದ ಬಳಿಕ ಅವರನ್ನು KMC ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಸುಮಾರು 3 ಲಕ್ಷ ರೂ. ವೆಚ್ಚವಾಗಿದ್ದು, ಮುಂದೆ ಇನ್ನೂ ಹಲವು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳಿಗೆ 5-6 ಲಕ್ಷ ರೂ. ವೆಚ್ಚವಾಗುವ ಸಾಧ್ಯತೆ ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ.



ಜತ್ತಪ್ಪ ಗೌಡ ಅವರು ಜ್ಯೂಸ್ ಮಾರಾಟದ ಮೂಲಕವೇ ಕುಟುಂಬ ನಿರ್ವಹಿಸುತ್ತಿದ್ದರು. ಅವರ ಚಿಕಿತ್ಸೆಗಾಗಿ Veera Maruthi Seva Trust (Reg) ವತಿಯಿಂದ ಆರ್ಥಿಕ ನೆರವು ಕೋರಲಾಗಿದೆ. ನೆರವು ನೀಡಲು:ಹೆಸರು: Jathappa M , A/C No: 30291458758 , IFSC: SBIN0040152, Phone: 9019740822










