ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ದುರ್ಗಾನಮಸ್ಕಾರ, ಕುಂಕುಮಾರ್ಚನೆ ಪೂಜೆ, ಸ್ಮರಣ ಸಂಚಿಕೆ ವಿತರಣಾ ಕಾರ್ಯಕ್ರಮ

0


ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.24 ಶುಕ್ರವಾರದಂದು ಕ್ಷೇತ್ರದ ತಂತ್ರಿಗಳಾದ ಕುಡುಪು ಶ್ರೀ ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ, ಶ್ರೀ ಸುಬ್ರಹ್ಮಣ್ಯ ಕಾರಂತರವರ ಸಂಕೀರ್ತನೆಯೊಂದಿಗೆ ಕುಂಕುಮಾರ್ಚನೆ ಮಹಾಪೂಜೆ, ಸ್ಮರಣ ಸಂಚಿಕೆ ವಿತರಣೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಆಟಿ ತಿಂಗಳಿನಲ್ಲಿ‌ ನಡೆಯುವ ಈ ವಿಶೇಷ ಪೂಜೆಯಲ್ಲಿ ಅಗಮಿಸಿದ ಭಕ್ತಾಧಿಗಳು ಸಾಮೂಹಿಕ ದುರ್ಗಾನಮಸ್ಕಾರ, ಕುಂಕುಮಾರ್ಚನೆ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವಿಕರಿಸಿ ಅನ್ನಸಂತರ್ಪಣೆಯಲ್ಲಿ‌ ಪಾಲ್ಗೊಂಡು ಶ್ರೀ ಕ್ಷೇತ್ರದ ಅಮ್ಮ‌ ಎನ್ನುವ ಸ್ಮರಣ ಸಂಚಿಕೆ ಪುಸಕವನ್ನು ಪಡೆದುಕೊಂಡರು.

ಸ್ಮರಣ ಸಂಚಿಕೆ ವಿತರಣಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಬಹಳ ವಿಜೃಂಭಣೆಯಿಂದ ನಡೆದಿದ್ದು ಇದರ ಸವಿ ನೆನಪಿಗಾಗಿ ಅಮ್ಮ ಎನ್ನುವ ಸ್ಮರಣ ಸಂಚಿಕೆ ಹೊರ ತಂದಿದ್ದು ಇದರ ವಿತರಣಾ ಕಾರ್ಯಕ್ರಮ ಶ್ರೀ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು.

ಸಭಾ ಧ್ಯಕ್ಷತೆಯನ್ನು ಸ್ಮರಣ ಸಂಚಿಕೆಯ ಗೌರವ ಸಂಪಾದಕರಾದ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ಕೃಷ್ಣಪ್ಪ ಪೂಜಾರಿ ಯವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸರ್ವ ಭಕ್ತರ ಸಮರ್ಪಣಭಾವದಿಂದ ಒಂದು ಪವಾಡದಂತೆ ಮಹಾನ್ ಕಾರ್ಯ ನಡೆದಿದೆ. ಇಂತಹ ನೆನಪು ಸವಿಸ್ಮರಣಿಯವಾಗಿ ಉಳಿಸುವ ದೃಷ್ಟಿಯಿಂದ ಅಮ್ಮ ಎನ್ನುವ ಸ್ಮರಣ ಸಂಚಿಕೆಯನ್ನು ಹೊರ ತಂದಿದ್ದೇವೆ. ಮನೆ ಮನೆತನ ಬೆಳಗಬೇಕಾದರೆ ಅಧ್ಯಾತ್ಮಿಕ ಪ್ರವೃತ್ತಿ ಜೀವಂತವಾಗಿರಬೇಕು. ಮಕ್ಕಳಿಗೆ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಬೇಕು ಎಂದು ತಿಳಿಸಿ ಶ್ರೀ ಕ್ಷೇತ್ರ ಶರವೂರಿನ ಅಮ್ಮ ಎನ್ನುವ ಸ್ಮರಣ ಸಂಚಿಕೆಯನ್ನು ಎಲ್ಲಾ ಭಕ್ತಾಧಿಗಳು ಪಡೆದುಕೊಳ್ಳುವಂತೆ ತಿಳಿಸಿದರು.

ಸ್ಮರಣ ಸಂಚಿಕೆಯ ಪ್ರದಾನ ಸಂಪಾದಕರಾದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಗಣರಾಜ್ ಕುಂಬ್ಳೆಯವರು ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಮತ್ತು ದೈವ ಸಾನಿಧ್ಯದ ಸ್ಮರಣೀಯ ಗ್ರಂಥ ಮಾಡಬೇಕೆಂಬ ಹಿರಿಯರ ಸಂಕಲ್ಪದಂತೆ ಸಂಗ್ರಹಕ್ಕೆ ಯೋಗ್ಯವಾದ ಪುಸ್ತಕದಂತೆ ಅಮ್ಮ ಎನ್ನುವ ಸ್ಮರಣ ಸಂಚಿಕೆ ಯನ್ನು ತಂದಿರುವುದಾಗಿ ತಿಳಿಸಿದರು. ಸ್ಮರಣ ಸಂಚಿಕೆ ಪುಸ್ತಕವನ್ನು ಹೊರತರಲು ಎಲ್ಲಾ ಸಮಿತಿಯವರು ಸಹಕರಿಸಿದ್ದಾರೆ ಎಂದು ತಿಳಿಸಿ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿ,ದೇವಸ್ಥಾನದ ಇತಿಹಾಸವನ್ನು ಸಾರುವ ಈ ಪುಸ್ತಕಕ್ಕೆ 200 ರೂಪಾಯಿ ಕಾಣಿಕೆಯಾಗಿ ಮೊತ್ತವನ್ನು ನಿಗದಿಮಾಡಿದ್ದು, ಈ ಹಣ ದೇವರಿಗೆ ಸಮರ್ಪಣೆಯಾಗಲಿದೆ ಎಂದು ತಿಳಿಸಿ ಈ ಸ್ಮರಣ ಸಂಚಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳವಂತೆ ತಿಳಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ ಹೇಮಂತ್ ರೈ ಮನವಳಿಕೆಗುತ್ತು ಉಪಸ್ಥಿತರಿದ್ದರು.

ಸ್ಮರಣ ಸಂಚಿಕೆ ಸಮಿತಿಯ ಸದಸ್ಯರಾದ ನಾರಾಯಣ ಭಟ್ ಸ್ವಾಗತಿಸಿ, ಸರಿತಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿ, ಮಮತಾ ಶೆಟ್ಟಿ ಅಂಬರಾಜೆ ಧನ್ಯವಾದ ಸಮರ್ಪಿಸಿದರು. ದೇವಸ್ಥಾನದ
ಪವಿತ್ರಪಾಣಿ ಯನ್.ಹರೀಶ ಆಚಾರ್ಯ ನಗ್ರಿಗುತ್ತು,ಸೇರಿದಂತೆ ವಿವಿಧ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು,ಆರ್ಚಕರು,ಸಿಬ್ಬಂದಿ ವರ್ಗ ,ಸೀಮೆಯ ಹತ್ತು ಸಮಸ್ತರು ಊರ ಪರವೂರ ಭಕ್ತಾಧಿಗಳು ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here