







ಕೊಲ್ಲಮೊಗ್ರು: ಕುರುಂಜಿ ವೆಂಕಟ್ರಮಣ ಗೌಡ ಅನುದಾನಿತ ಪ್ರೌಢಶಾಲೆಯ ಮೈದಾನ ಮತ್ತು ಶಾಲಾ ಸುತ್ತಲಿನ ಪರಿಸರದ ಸ್ವಚ್ಛತಾ ಕಾರ್ಯವನ್ನು ಕೊಲ್ಲಮೊಗ್ರು ಚೈತನ್ಯ ಯುವತಿ ಮಂಡಲದ ಪದಾಧಿಕಾರಿಗಳು ಜುಲೈ 25ರಂದು ನಡೆಸಿದರು.



ಸ್ವಚ್ಛತಾ ಕಾರ್ಯದಲ್ಲಿ ಮಂಡಲದ ಪದಾಧಿಕಾರಿಗಳಾದ ನೀಲಾವತಿ ತಂಬಿನಡ್ಕ, ರೀತಾ ಪಡಿಕಲ್ಲು, ಸುನಂದ ಗಡಿಕಲ್ಲು, ತಾರಾ ಕಲ್ಕೂದಿ, ಲತಾ ಕುಮಾರಿ ತಂಬಿನಡ್ಕ ಭಾಗವಹಿಸಿದರು. ಮಳೆಯ ಕಾರಣ ಶಾಲೆಗೆ ರಜೆಯಿದ್ದರೂ ಅಕ್ಷರ ದಾಸೋಹ ಸಿಬ್ಬಂದಿ ದಿವ್ಯಾಕುಮಾರಿ ಉಪಹಾರ ವ್ಯವಸ್ಥೆಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಕೆ.ಪಿ, ಸಹಶಿಕ್ಷಕರಾದ ಲೋಕನಾಥ, ರಾಜೇಶ್, ಚಂದ್ರು ಉಪಸ್ಥಿತರಿದ್ದರು.













