ಅ.31: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ, ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.31ರಂದು ಮಂದಿರದ ಪ್ರತಿಷ್ಠಾ ವರ್ಧಂತಿ ಕುರಿತು ಆಮಂತ್ರಣ ಪತ್ರ ಬಿಡುಗಡೆಯು ಜು.24ರಂದು ರಾತ್ರಿ ಮಂದಿರದಲ್ಲಿ ನಡೆಯಿತು.


ಅರ್ಚಕ ತಿರುಮಲೇಶ್ವರ ಭಟ್ ಪ್ರಾರ್ಥಿಸಿ ಆಮಂತ್ರಣ ಪತ್ರವನ್ನು ಮಂದಿರದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ಪುಷ್ಪರಾಜ್ ಹೆಗ್ಡೆ, ಉಪಾಧ್ಯಕ್ಷ ಯಶವಂತ ಆಚಾರ್ಯ, ಸದಸ್ಯರುಗಳಾದ ಫಕೀರ ಗೌಡ, ಕೃಷ್ಣ ಮಚ್ಚಿಮಲೆ, ಗೋಪಾಲ ಆಚಾರ್ಯ, ಲಿಂಗಪ್ಪ ಗೌಡ, ಜನಾರ್ದನ, ಡಾ. ರಾಮಕೃಷ್ಣ, ಗಣೇಶ್, ಆಶಾ ಯಶವಂತ, ಸ್ಪೂರ್ತಿ ಉಜ್ರುಪಾದೆ, ಗುಲಾಬಿ ಗೌಡ, ಹರಿಣಿ ಗೌಡ, ಕರಣ್ ಗೌಡ ಮತ್ತಿತರರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here