ಅಜೇಯನಗರ ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ

0

ಪುತ್ತೂರು: ಇಲ್ಲಿನ ಅಜೇಯನಗರದ ಮಹಿಳೆಯೊಬ್ಬರ ಮೃತದೇಹ ಶಂಭೂರು ಡ್ಯಾಮ್ ಬಳಿ ಜು.24ರ ತಡರಾತ್ರಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.


ಪಡ್ನೂರು ಗ್ರಾಮದ ಅಜೇಯನಗರ ನಿವಾಸಿ ರಾಮ್ ಭಟ್ ಅವರ ಪತ್ನಿ ವಿಜಯ (60ವ.) ಮೃತಪಟ್ಟವರು.

ಜು.23ರಂದು ಪೇಟೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅವರು ನಾಪತ್ತೆಯಾಗಿದ್ದರು. ಜು.24ರಂದು ರಾಮ್ ಭಟ್ ಅವರು ಈ ಕುರಿತು ನೀಡಿದ್ದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ದಿನ ರಾತ್ರಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.

ಮೃತರು ಪತಿ ರಾಮ ಭಟ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here