ಎಸ್‌ಡಿಪಿಐ ಕಬಕ ಬ್ಲಾಕ್ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಬಕ ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷರಾಗಿ ಸಮೀರ್ ಮುರ, ಕಾರ್ಯದರ್ಶಿಯಾಗಿ ಶಾಕೀರ್ ಕಬಕ ಅವರನ್ನು ಆಯ್ಕೆ ಮಾಡಲಾಗಿದೆ.


ಉಪಾಧ್ಯಕ್ಷರಾಗಿ ಕರೀಂ ಬೀಟಿಗೆ, ಜೊತೆ ಕಾರ್ಯದರ್ಶಿ ನೌಷದ್ ಉರಿಮಜಲು, ಕೋಶಾಧಿಕಾರಿಯಾಗಿ ಪೋಳ್ಯ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಸಜ್ಜಾದ್ ಮುರ ಹಾಗೂ ಫಾರೂಕ್ ತವಕ್ಕಲ್ ಅವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.


ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ. ಕೆ. ಸದಸ್ಯರಾದ ಸದ್ದಾಂ ಮುರ, ಅಝೀಝ್ ಕಬಕ ಹಾಗೂ ಕಬಕ ಬ್ಲಾಕ್‌ನ ವಿವಿಧ ಬ್ರಾಂಚ್‌ಗಳ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here