






ಪೆರಾಬೆ: ವಿಕಾಸ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಪೆರಾಬೆ ಇದರ ವಾರ್ಷಿಕ ಮಹಾಸಭೆ ಜು.24ರಂದು ಪೆರಾಬೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಜಿ. ಉದ್ಘಾಟಿಸಿದರು. ಸಂಜೀವಿನಿ ಯೋಜನೆ ಬಗ್ಗೆ ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಬ್ಯಾಂಕ್ ಸಾಲ ಹಾಗೂ ವಿಮೆಯ ಬಗ್ಗೆ ಗೀತಾ ಅವರು ಮಾಹಿತಿ ನೀಡಿದರು. ಪೆರಾಬೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಮ್ಮಿ ಬಿ.ಪಿ., ಆಡಳಿತಾಧಿಕಾರಿ ಅಜಿತ್, ಆರೋಗ್ಯಾಧಿಕಾರಿ ಲೀಲಾವತಿ, ಬಿಆರ್‌ಇಪಿ ರಮ್ಯ, ಧನ್ಯ, ಕೆನರಾ ಬ್ಯಾಂಕ್ ಆಲಂಕಾರು ಶಾಖಾ ಮೇನೇಜರ್ ರಾಧ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ವರದಿ ವಾಚಿಸಿದರು. ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಸ್ವಾಗತಿಸಿದರು. ಲಿಖಿತ ವಂದಿಸಿದರು. ಎಂಬಿಕೆ ಮಾಲತಿ ಬಿ. ನಿರೂಪಿಸಿದರು. ಉಮಾವತಿ ಬಿ.ಪ್ರಾರ್ಥಿಸಿದರು. ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಸ್ಪರ್ಧೆಯನ್ನು ಗ್ರಾ.ಪಂ.ಮಾಜಿ ಸದಸ್ಯ ರಾಜು ಕೆ.ನಡೆಸಿಕೊಟ್ಟರು. ವಿಆರ್‌ಡಬ್ಲ್ಯು ಕಾರ್ಯಕರ್ತ ಮುತ್ತಪ್ಪ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಕಳು ಸಹಕರಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ;
ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರೇಖಾ ಶೇಖರ್ ಕೋಡಿಯಡ್ಕ, ಕಾರ್ಯದರ್ಶಿಯಾಗಿ ಚೈತ್ರಾ ರಾಜೇಶ್, ಉಪಾಧ್ಯಕ್ಷರಾಗಿ ಸುಕೇತಾ, ಜೊತೆ ಕಾರ್ಯದರ್ಶಿಯಾಗಿ ಪದ್ಮಾವತಿ, ಕೋಶಾಧಿಕಾರಿಯಾಗಿ ಶಶಿಕಲಾ, ಉಪ ಸಮಿತಿಯ ಸದಸ್ಯರಾಗಿ ಸುಶೀಲಾ, ಮಮತಾ, ಅಮಿತಾ, ಸುಪ್ರಿಯಾ ಆಯ್ಕೆಯಾದರು.










