







ಪುತ್ತೂರು: ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆಯುವ ಉತ್ಸವಕ್ಕೆ 44ರ ವರ್ಷದ ಸಂಭ್ರಮ.ಉತ್ಸವದ ಅಂಗವಾಗಿ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಮುಕ್ರಂಪಾಡಿ ಧರ್ಮಶ್ರೀ ನಗರದ ವಿಘ್ನೇಶ ವಠಾರದಲ್ಲಿ ಟ್ರಸ್ಟ್ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಪ್ರಸ್ತುತ ವರ್ಷದ ಗೌರವಾಧ್ಯಕ್ಷರಾಗಿ ಪ್ರಕಾಶ್ ಮುಕ್ರಂಪಾಡಿ, ಅಧ್ಯಕ್ಷರಾಗಿ ಜಯಕೃಷ್ಣ ಇ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಎ, ಬೃಜೇಶ್ ಡಿ.ಕೆ, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಶೀತಲ್ ರೈರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಹವೀಶ ಎ, ಆಕಾಶ್ ಸಾಲ್ಯಾನ್, ಶ್ರವಣ್ ಡಿ, ಪ್ರಣಾಮ್ ನಡ್ಕ, ಭವತ ಬಿ.ಎಲ್, ಲಿಖಿತ್ ಜೆ.ಡಿ, ಕೀರ್ತನ್, ಪ್ರಕೃತ್ ಜಿ.ಕೆ, ಭುವನೇಶ್, ಪ್ರಥ್ವಿ ಶೆಟ್ಟಿ, ವೈಭವ್ ನೆಲ್ಯಾಡಿ, ಕೌಶಲ್ ಗೌಡ, ರಾಹುಲ್ ಕೆ, ಹಾರ್ದಿಕ್ ಎಸ್.ನಾಯಕ್, ಆಶ್ರಯ್, ನಿಖಿತಾ, ನಿಶ್ಮಿತಾ ರೈ, ದೀಕ್ಷಿತ್, ಜಗನ್ ಶೆಟ್ಟಿ, ವೈಷ್ಣವಿ ಶೆಟ್ಟಿಯವರು ಆಯ್ಕೆಯಾದರು.













