ಪುಣಚ: ವರಮಹಾಲಕ್ಷ್ಮಿ ಪೂಜಾ ಸಮಿತಿಗೆ ಆಯ್ಕೆ

0

ಅಧ್ಯಕ್ಷೆ: ಸುಂದರಿ ಕೊಚ್ಚಿ, ಕಾರ್ಯದರ್ಶಿ: ರೇಖಾ ಬೈಲು ದರ್ಖಾಸು

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀದೇವಿ ಮಹಿಳಾ ಮಂಡಳಿಯವರಿಂದ ಆ.28ರಂದು ನಡೆಯಲಿರುವ 24ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ನೂತನ ಅಧ್ಯಕ್ಷೆಯಾಗಿ ಸುಂದರಿ ಶಂಕರ ಕೊಚ್ಚಿ ನವಗ್ರಾಮ, ಕಾರ್ಯದರ್ಶಿಯಾಗಿ ರೇಖಾ ಅಶೋಕ್ ಬೈಲು ದರ್ಖಾಸು ಆಯ್ಕೆಯಾದರು.ಶ್ರೀದೇವಿ ವಿದ್ಯಾಕೇಂದ್ರದ ಅಮೃತ ಭಾರತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಯಮುನಾ ಗೌಡ ಅಜೇರುಮಜಲು, ಸಂಚಾಲಕಿ ಗಂಗಮ್ಮ ಪಿ, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here