







ಈಶ್ವರಮಂಗಲ : ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ಸಂಘಗಳ ಉದ್ಘಾಟನೆ ಹಾಗೂ ದಿವಂಗತ ಜಯರಾಮ್ ರೈ ಸಾಂತ್ಯ ಇವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ನೀಡಲ್ಪಡುವ ದತ್ತಿನಿಧಿ ವಿತರಣಾ ಸಮಾರಂಭ ಜು.22ರಂದು ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನುದೀಪ ಪ್ರಜ್ವಲನದೊಂದಿಗೆ ಪೋಷಕ- ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ ಗೌಡ ಕೆ ಹಾಗೂ ಉಪಾಧ್ಯಕ್ಷರಾದ ಅಬೂಬಕ್ಕರ್ ಕೆ ಎಂ ಇವರು ನೆರವೇರಿಸಿದರು.



ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಘಗಳ ಕಿರು ಪರಿಚಯವನ್ನು ವಿವರಿಸಿದರು. ದಿವಂಗತ ಜಯರಾಮ್ ರೈ ಸಾಂತ್ಯ ಇವರ ಸ್ಮರಣಾರ್ಥ ದತ್ತಿನಿಧಿಯ ರೂಪದಲ್ಲಿ ನೀಡಲ್ಪಟ್ಟ ಶಾಲಾ ಬ್ಯಾಗ್, ಯೂನಿಫಾರ್ಮ್ ,ಬರವಣಿಗೆಯ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕೊಡೆ ಮತ್ತು ಶಾಲಾಶುಲ್ಕ ಇತ್ಯಾದಿಗಳನ್ನು ಒಳಗೊಂಡ ಕಿಟ್ ಅನ್ನು ವಿದ್ಯಾರ್ಥಿಗಳಿಗೆ ಅತಿಥಿಗಳು ವಿತರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ, ಸಂಚಾಲಕ ಸರ್ವೋತ್ತಮ ಬೋರ್ಕರ್, ನಿರ್ದೇಶಕ ಕೃಷ್ಣಪ್ಪ ಗೌಡ ಕೆ ಹಾಗೂ ಮುಖ್ಯ ಗುರು ವನಿತಾ ಕೆ ಉಪಸ್ಥಿತರಿದ್ದರು. ಶಿಕ್ಷಕಿ ವಿನುತಾ ವರದಿ ವಾಚಿಸಿದರು. ಶಿಕ್ಷಕ ಸುರೇಶ್ ಪಾಣ ಸ್ವಾಗತಿಸಿ , ಶಿಕ್ಷಕಿ ಸುಪ್ರಭಾ ಪಿ ವಂದಿಸಿದರು. ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರೂಪಸಿದರು.










