‘ಯಶ್ಪಾಲ್ ಅವರಿಗೆ ಧಮ್ಮಿದ್ರೆ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಲಿ’ – ಹೆಚ್ ಮಹಮ್ಮದ್ ಆಲಿ

0

ಪುತ್ತೂರು: ರಾಹುಲ್ ಗಾಂಧಿಯವರ ವಂಶ ನಿರ್ಣಾಮ ಎಂಬ ಹೇಳಿಕೆ ನೀಡಿಕೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಧಮ್ಮಿದ್ರೆ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಲಿ. ಅವರ ಈ ಹೇಳಿಕೆ ವಿರುದ್ಧ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯಿಂದ ದೂರು ನೀಡಲಾಗುವುದು ಎಂದು ದ ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್ ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ರಾಹುಲ್ ವಂಶ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ವಂಶ. ಅವರ ವಿರುದ್ಧ ಹೇಳಿಕೆ ನೀಡುವವರು ರಾಹುಲ್ ಗಾಂಧಿಯ ಕಾಲ್ನಡಿಯ ಧೂಳಿಗೆ ಸಮ. ಯಶ್ಪಾಲ್ ಅವರಿಗೆ ಧಮ್ಮಿದ್ರೆ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಎಂದರು. ಯಶ್ಪಾಲ್ ಸುವರ್ಣ ಅವರು ಉಡುಪಿಯ ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ ಕೋವಿಡ್ ಬಳಿಕ ತನ್ನ ಬ್ಯಾಂಕ್‌ನಿಂದ ಸುಮಾರು 300 ಜನರ ಹೆಸರಿನಲ್ಲಿ 2.50 ಲಕ್ಷ ಲೋನ್ ಮಂಜೂರು ಮಾಡಿ ಅವರಿಗೆ ಕೇವಲ ರೂ.25 ರಿಂದ 30ಸಾವಿರ ಮಾತ್ರ ಹಣ ನೀಡಿ ವಂಚಿಸಿರುವ ಪ್ರಕರಣದ ಆರೋಪಿಯಾಗಿದ್ದಾರೆ. ಇಂತವರು ರಾಹುಲ್ ಗಾಂಧಿಯವರ ವಂಶ ನಿರ್ನಾಮ ಮಾಡುವ ಹೇಳಿಕೆ ನೀಡುತ್ತಾರೆ ಎಂದಾದರೆ ಇವರನ್ನು ಮುಂದಿನ ಚುನಾವಣೆಯಲ್ಲಿ ಜನರೇ ನಿರ್ನಾಮ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂತಹ ಪೋಲಿ ಸಂಸ್ಕೃತಿಯವರನ್ನು ಎಮ್.ಎಲ್.ಎ, ಎಂಎಲ್‌ಸಿ, ಎಂಪಿ ಮಾಡುತ್ತಿದೆ ಎಂದ ಅವರು ಇನ್ನೊಂದು ಕಡೆ ಸಿಟಿ ರವಿ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಹರೀಶ್‌ಪೂಂಜಾ, ಭರತ್ ಶೆಟ್ಟಿ, ಸೂಲಿಬೆಲೆಯಂತಹ ಕೊಳಕು ಬಾಯಿಯ ಸಂಸ್ಕೃತಿ ಹೀನರು ಆರ್‌ಎಸ್‌ಎಸ್ ಮೋಡೆಲ್ ಪ್ರಾಡಕ್ಟ್‌ಗಳು. ಇತ್ತೀಚೆಗೆ ಸಿಟಿ ರವಿ ಅವರು ಮುಲ್ಲಾಗಳನ್ನು ಹೀಯಾಳಿಸಿ ಹೇಳಿಕೆ ನೀಡಿದ್ದಾರೆ. ಅದೇ ಶಾಸಕರಾಗಿರುವ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್ ಅವರು ಯಾವತ್ತೂ ಇಂತಹ ಪದ ಬಳಕೆ ಮಾಡಿಲ್ಲ ಎಂದರು. ಒಟ್ಟಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಸೂಚನೆಯಂತೆ ಯಶ್ಪಾಲ್ ಸುವರ್ಣ ಅವರ ವಿರುದ್ದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪ್ರಚಾರ ಸಮಿತಿಯಿಂದ ದೂರು ಸಲ್ಲಿಸುವ ಕಾರ್ಯ ನಡೆಯಲಿದೆ ಎಂದರು.


ಹೇಳಿಕೆ ಖಂಡನೀಯ:
ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಅವರು ಮಾತನಾಡಿ ರಾಮನ ಭಕ್ತರಾದವರು ರಾಮನ ಆದರ್ಶವನ್ನು ಪಾಲಿಸಬೇಕು. ಆದರೆ ಅದು ಯಾವುದನ್ನೂ ಪಾಲಿಸದೆ ದ್ವೇಷ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಅನಾಗರಿಕ ಪ್ರವೃತ್ತಿಯನ್ನು ಯಶ್ಪಾಲ್ ಸುವರ್ಣ ಹೊಂದಿದ್ದಾರೆ. ಭಾರತ್ ಜೋಡೋ ಪರಿಕಲ್ಪಣೆಯ ಮೂಲಕ ದೇಶವನ್ನು ಒಂದುಗೂಡಿಸಿವ ರಾಹಲ್‌ಗಾಂಧಿ ವಿರುದ್ಧ ಹೇಳಿರುವ ಹೇಳಿಕೆ ಖಂಡನೀಯ ಎಂದರು.


ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಿದ್ದು ರಾಹುಲ್:
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎನ್ ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ದೆಹಲಿಯಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಲು ರಾಹುಲ್ ಗಾಂಧಿ ಬಂದಾಗ ಅಲ್ಲಿದ್ದ ವಿದ್ಯಾರ್ಥಿಗಳಿಗೆ ಧೈರ್ಯ ಬಂತು. ಯಾಕೆಂದರೆ ಆ ಸಂದರ್ಭ ನನ್ನ ಮಗಳು ಕೂಡ ಇದ್ದಳು. ಅವಳೇ ಹೇಳಿದಂತೆ ಪ್ರಥಮ ಪರೀಕ್ಷೆಯಲ್ಲಿ ಅವರಿಗೆ ಉತ್ತಮ ಅಂಕ ಬಂದಿತ್ತು. ಮರು ಪರೀಕ್ಷೆ ವೇಳೆ ಅಂಕ ಕಡಿಮೆಯಾಗಿತ್ತು ಎಂದಿದ್ದಳು. ಇಂತಹ ಸಂದರ್ಭದಲ್ಲಿ ರಾಹಲ್ ಗಾಂಧಿಯವರು ಇವತ್ತು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಅಂತವರ ವಿರುದ್ಧ ಹೇಳಿಕೆ ನೀಡಿದವರಿಗೆ ಜನರೇ ಉತ್ತರ ಕೊಡಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ್ ಗೌಡ ಬಪ್ಪಳಿಗೆ, ಕಡಬ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಯತೀಶ್ ಕುಮಾರ್ ಗೌಡ ಪಾನಡ್ಕ, ಉಪ್ಪಿನಂಗಡಿ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಗಣೇಶ್‌ರಾಜ್ ಬಿಳಿಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here