







ಪ್ರಕೃತಿಯೊಟ್ಟಿಗೆ ಬದುಕುವ ಕಲೆ ಆಟಿ-ವಾರಿಜ ಗೌಡ


ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಆಟಿ ಕೂಟ ಕಾರ್ಯಕ್ರಮ ಜು.30ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.



ಪ್ರಕೃತಿಯೊಟ್ಟಿಗೆ ಬದುಕುವ ಕಲೆ ಆಟಿ-ವಾರಿಜ ಗೌಡ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿಶ್ರಾಂತ ಉಪನ್ಯಾಸಕಿ ಶ್ರೀಮತಿ ವಾರಿಜ ಬೆಳಿಯಪ್ಪ ಗೌಡರವರು ಮಾತನಾಡಿ, ಆಟಿ ತಿಂಗಳು ಪ್ರಕೃತಿ ಒಟ್ಟಿಗೆ ಬದುಕುವ ಕಲೆ ತಿಳಿಸಿದ ತಿಂಗಳಾಗಿದೆ. ಆಟಿ ಪರಿಗಣಿತ ಬಡತನದ ತಿಂಗಳು ಅಲ್ಲ ಅದು ಆರೋಗ್ಯಕ್ಕೆ ಸಂಜೀವಿನಿ ಔಷಧ ತೋರಿಸಿದ ತಿಂಗಳಾಗಿದೆ. ಆಟಿ ತಿನಸುಗಳು, ಆಟಿ ಕಷಾಯಗಳಲ್ಲಿ ವೈಜ್ಞಾನಿಕತೆ ಮೇಳೈಸಿದೆ ಎಂದರು.
ಪ್ರತಿಯೊಂದು ಸಂಪ್ರದಾಯಗಳು ಕಾಲಕ್ಕೆ, ಅನುಭವಕ್ಕೆ ತಕ್ಕಂತೆ ಮಾಡಿರುವುದಾಗಿದೆ-ಬಾಲಚಂದ್ರ ಕೆ:
ಪುತ್ತೂರು ನಗರಸಭೆ ನಿಕಟಪೂರ್ವ ಉಪಾಧ್ಯಕ್ಷ ಬಾಲಚಂದ್ರ ಕೆ. ಮಾತನಾಡಿ, ಕರಾವಳಿ ಭಾಗದ ಹಿರಿಯರು ಬಹುತೇಕ ಕೃಷಿಕರಾಗಿದ್ದು ಪ್ರಸ್ತುತ ಕೃಷಿಕರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಂದು ಸಂಪ್ರದಾಯಗಳು ಕಾಲಕ್ಕೆ, ಅನುಭವಕ್ಕೆ ತಕ್ಕಂತೆ ಮಾಡಿರುವುದಾಗಿದೆ. ಆಟಿ ತಿಂಗಳ ಬಿಸಿಲು ಆನೆದ ಬೆನ್ನು ಹೊಡೆಯುತ್ತದೆ, ಹೊರಗೆ ಬರಲಾರದಷ್ಟು ಭೀಕರ ಮಳೆ ಸುರಿಯುವುದು ಆಗಿದೆ. ಕರಾವಳಿ ಭಾಗದ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಅದರ ಪ್ರಾಮುಖ್ಯತೆಯನ್ನು ಮುಂದಿನ ಪೀಳಿಗೆಗೆ ಮನದಟ್ಟು ಮಾಡಬೇಕಾಗಿದೆ ಎಂದರು.
ಆಚರಣೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ-ಪ್ರೊ|ಝೇವಿಯರ್ ಡಿ’ಸೋಜ:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ಆಟಿ ಸಂಸ್ಕೃತಿ ನಮ್ಮ ಬದುಕಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತ ಆಚರಣೆಯಾಗಿದೆ. ಇಂತಹ ಆಚರಣೆಗಳಲ್ಲಿ ರೋಟರಿ ಬಂಧುಗಳನ್ನು ಕರೆಸಿ ಪರಸ್ಪರ ಬಾಂಧವ್ಯ ವೃದ್ಧಿಸುವಂತಾಗಿದೆ. ರೋಟರಿ ಚಟುವಟಿಕೆಗಳಲ್ಲಿ ರೋಟರಿ ಸದಸ್ಯರು ಭಾಗವಹಿಸಿದ್ದಷ್ಟು ಜ್ಞಾನ ಬೆಳೆಯುತ್ತದೆ ಎಂದರು.
ಆಯಾ ರಾಜ್ಯಗಳ ಭಾಷೆಗಳನ್ನು ಗೌರವಿಸುವವರಾಗಬೇಕು-ಸುಂದರ್ ರೈ:
ರೋಟರಿ ವಲಯ ಸೇನಾನಿ ಸುಂದರ್ ರೈ ಬಲ್ಕಾಡಿ ಮಾತನಾಡಿ, ತುಳುನಾಡಿನ ಭಾಷೆ ಬಗ್ಗೆ, ಸಂಸ್ಕೃತಿ ಬಗ್ಗೆ ತಿಳಿಯುವವರಾಗಬೇಕು. ಆಯಾ ರಾಜ್ಯಗಳ ಭಾಷೆಗಳನ್ನು ಗೌರವಿಸುವವರಾಗಬೇಕು. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಮುಂದುವರೆಸುವಂತಾಗಲಿ ಎಂದರು.
ಕಾಲ ಬದಲಾಗಿಲ್ಲ, ನಮ್ಮ ಬದುಕು ಬದಲಾಗಿದೆ-ಚಿದಾನಂದ ಬೈಲಾಡಿ:
ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳ 31 ದಿನಗಳಲ್ಲಿ ಬೇರೆ ಬೇರೆ ಆರೋಗ್ಯದ ತಿನಸುಗಳನ್ನು ಮಾಡುತ್ತಿದ್ದರು. ಆದರೆ ಇಂದು 31 ಖಾದ್ಯಗಳನ್ನು ಒಂದೇ ದಿನ ತಯಾರಿಸಿ ಉಣಬಡಿಸಲಾಗುತ್ತಿದೆ. ಕಾಲ ಬದಲಾಗಿಲ್ಲ, ನಮ್ಮ ಬದುಕು ಬದಲಾಗಿದೆ. ಹಿಂದಿನಿಂದ ಇಂದಿನ ತನಕವೂ ಮಾಂಸಹಾರಿ ಪ್ರಾಣಿಗಳು ಇಂದಿಗೂ ಮಾಂಸಹಾರಿಗಳೇ, ಸಸ್ಯಹಾರಿ ಪ್ರಾಣಿಗಳು ಸಸ್ಯಹಾರಿಗಳೇ ಆದರೆ ಮಾನವ ಮಾತ್ರ ಬದಲಾಗುತ್ತಾ ಇದ್ದಾನೆ ಎಂದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಶುಭ ಹಾರೈಸಿದರು. ಕ್ಲಬ್ ಕೋಶಾಧಿಕಾರಿ ವಿಜಯ್ ಡಿ’ಸೋಜ ಮನರಂಜನಾ ಗೇಮ್ಸ್ ಗಳನ್ನು ನಿರ್ವಹಿಸಿದರು. ಕ್ಲಬ್ ಅಧ್ಯಕ್ಷೆ ಆಶಾ ರೆಬೆಲ್ಲೋ ಸ್ವಾಗತಿಸಿ, ಕಾರ್ಯದರ್ಶಿ ಸಂಧ್ಯಾ ಬೈಲಾಡಿ ವಂದಿಸಿದರು. ದೀಪಕ್ ಬೊಳ್ವಾರು ಕಾರ್ಯಕ್ರಮ ನಿರೂಪಿಸಿದರು.
ಒಟ್ಟಿಗೆ ಸೇರಿದಾಗ ಬಾಂಧವ್ಯ ವೃದ್ಧಿ..
ಆಟಿ ತಿಂಗಳಲ್ಲಿ ವಿಪರೀತ ಮಳೆ ಬರುವುದರಿಂದ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ಮಾತಿದೆ. ಹಿಂದಿನ ಹಿರಿಯರು ಆಟಿ ತಿಂಗಳಲ್ಲಿ ಸೇವಿಸಲ್ಪಡುವ ಆಹಾರಗಳು ಆರೋಗ್ಯಪೂರ್ಣ, ವೈಜ್ಞಾನಿಕ ಗುಣಗಳಿರುವ ಆಹಾರಗಳಾಗಿವೆ. ರೋಟರಿ ಸಂಸ್ಥೆ ಕೂಡ ಆಟಿ ತಿಂಗಳ ಆಹಾರ ಪದ್ಧತಿಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬಂದಿರುತ್ತದೆ. ರೋಟರಿ ಸದಸ್ಯರು ಒಂದಲ್ಲ ಒಂದು ಆಹಾರವನ್ನು ಮನೆಯಲ್ಲೇ ತಯಾರಿಸಿ ಉಣಬಡಿಸುವುದು ನೋಡಿದಾಗ ಖುಶಿಯೆನಿಸುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲೂ ನಮ್ಮ ಬಾಂಧವ್ಯ ಮುಂದುವರೆದಾಗ ರೋಟರಿ ಮತ್ತಷ್ಟು ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳಿಗೂ ರೋಟರಿ ಸದಸ್ಯರ ಸಹಕಾರವಿದ್ದು ರೋಟರಿ ಸಂಸ್ಥೆಯನ್ನು ಉತ್ತುಂಗದತ್ತ ಕೊಂಡೊಯ್ಯೋಣ.
ಆಶಾ ರೆಬೆಲ್ಲೋ, ಅಧ್ಯಕ್ಷೆ, ರೋಟರಿ ಪುತ್ತೂರು ಸ್ವರ್ಣ
ಘಮಘಮಿಸಿದ ಖಾದ್ಯಗಳು..
ರೋಟರಿ ಸ್ವರ್ಣವು ಪ್ರತೀ ವರ್ಷ ಆಟಿ ಕೂಟವನ್ನು ವಿಜ್ರಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದು ಈ ವರ್ಷವೂ ಅಧ್ಯಕ್ಷೆ ಆಶಾ ರೆಬೆಲ್ಲೋರವರ ಮುಂದಾಳತ್ವದಲ್ಲಿ ಕ್ಲಬ್ ಸದಸ್ಯರು ಕಣಿಲೆ ಗಸಿ, ಕೋರಿ ಸುಕ್ಕ, ಚಟ್ನಿ, ಸೇಮಿಗೆ ರಸಾಯನ, ಕೋರಿ ಪುಳಿಮುಂಚಿ, ಕಡ್ಲೆ ಬಲ್ಯಾರ್ ಹೀಗೆ ಸುಮಾರು 25 ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಆಗಮಿಸಿದವರಿಗೆ ಉಣಬಡಿಸಲಾಗಿತ್ತು.










