







ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ಅವಧಿ ಮಾರ್ಚ್ 2026ಕ್ಕೆ ಮುಕ್ತಾಯಗೊಂಡಿದ್ದು ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮೂರು ಗ್ರಾಮಗಳಾದ ಬನ್ನೂರು, ಚಿಕ್ಕಮುಡ್ನೂರು, ಪಡ್ನೂರು ಗ್ರಾಮಗಳ ನಾಗರಿಕರಿಗೆ ಹತ್ತು ಹಲವು ಪಂಚಾಯತ್ ಸೇವೆಗಳು, ಅಭಿವೃದ್ಧಿ ಕಾರ್ಯಗಳು, ನಿರ್ವಹಣೆ ಕಾರ್ಯಗಳು ಕುಂಠಿತಗೊಂಡಿವೆ. ಹಾಗಾಗಿ ಗ್ರಾಮ ಸಭೆ ಮಾಡುವಂತೆ ಬನ್ನೂರು ಪಡ್ನೂರು ಗ್ರಾಮದ ಸುದರ್ಶನ್ ಒತ್ತಾಯಿಸಿದ್ದಾರೆ.


2026ನೇ ಸಾಲಿನ ಪ್ರಾಕೃತ್ರಿಕ ವಿಪತ್ತು ಮಳೆಗೆ ಸಂಭಂದಿಸಿದಂತೆ ದ.ಕ. ಜಿಲ್ಲಾಧಿಕಾರಿಗಳು, ಸಹಾಯಕ ಕಮೀಷನರ್, ಪುತ್ತೂರು, ಜಿಲ್ಲಾ ಉಸ್ತುವಾರಿ ಸಚಿವರ ಸಭೆ. ಪುತ್ತೂರು ಶಾಸಕರು ಇಲಾಖಾಧಿಕಾರಿಗಳೊಂದಿಗೆ ನಡೆಸಿದ ಪ್ರಾಕೃತ್ರಿಕ ವಿಪತ್ತು ಮಳೆ ಜೂನ್, ಜುಲೈ, ಅಗಸ್ 2026 ಅವಧಿಯಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಸಾಕಷ್ಟು ಮುಂಜಾಗ್ರತ ಕೈಗೊಳ್ಳಲು ಸಭೆ ನಡೆಸಿ ಸಂಬಂಧಪಟ್ಟ ಸ್ಥಳಿಯಾಡಳಿತ, ಪಂಚಾಯತ್ ಗಳು ಮುನ್ನೆಚ್ಚರಿಕೆ ದೂರುಗಳನ್ನು ನಿರ್ಲಕ್ಷಿಸಿದ ಪರಿಣಾಮ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಅವಧಿ ಮುಗಿದ ಪಂಚಾಯತ್ ಗಳಿಗೆ ಮರು ಚುನಾವಣೆ ಇನ್ನಷ್ಟು ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಬನ್ನೂರು ಪಂಚಾಯತ್ ಗ್ರಾಮ ಸಭೆಯನ್ನು ಏರ್ಪಡಿಸಿ ನೆನೆಗುದಿಗೆ ಬಿದ್ದಿರುವ ಕಡತಗಳು, ಅರ್ಜಿಗಳಿಗೆ ಕ್ರಮ ಜರುಗಿಸುವುದು.



ರೈತರಿಗೆ ಮತ್ತು ಫಲಾನುಭವಿಗಳಿಗೆ ವಿವಿಧ ಪಂಚಾಯತ್ ಹಾಗೂ ಸರ್ಕಾರದ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕೆಂದು ಒತ್ತಾಯಿಸಲಾಗಿದೆ. ವಿದ್ಯುತ್ ಮೀಟರ್ ಬಳಕೆ ಪರಿಷ್ಕರಣೆ, ಮಳೆಗಾಲದಲ್ಲಿ ಹೊಂಡಬಿದ್ದಿರುವ ರಸ್ತೆಗೆ ತೇಪೆ ಕಾರ್ಯ, ಮಳೆ ನೀರಿನ ಚರಂಡಿ ಸ್ವಚ್ಛಗೊಳಿಸುವಿಕೆ, ರಸ್ತೆ ಬದಿಯ ಗಿಡಗಂಟಿ ತೆರವು, ಬೋರ್ ವೆಲ್ ಸುತ್ತ ಕಸ ವಿಲೇವಾರಿ ಮತ್ತು ಬೋರ್ ವೆಲ್ಗಳಿಗೆ ನೀರಿಂಗಿಸುವಿಕೆ ಕೆಲಸಗಳನ್ನು ನೆರವೇರಿಸಬೇಕೆಂದು ಮನವಿ ಮಾಡಲಾಗಿದೆ. ಮಳೆಗಾಲದಲ್ಲಿ ರಸ್ತೆಯುದ್ದಕ್ಕೂ ರಸ್ತೆ ಮತ್ತು ವಿದ್ಯುತ್ ತಂತಿಗಳ ಮೇಲೆ ಇರುವ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸಬೇಕು. ಜೊತೆಗೆ ದಾರಿ ದೀಪ, ಕುಡಿಯುವ ನೀರಿನ ಪೈಪ್ ಲೈನ್, ಸಂಗ್ರಹಣ ಟ್ಯಾಂಕಿ ನಿರ್ವಹಣಾ ಕಾರ್ಯವನ್ನು ಕೂಡಲೇ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿ.ಪಂ., ತಾ.ಪಂ., ಬನ್ನೂರು ಪಂಚಾಯತ್ ಆಡಳಿತಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ









