







ಪುತ್ತೂರು: ಈಗಾಗಲೇ ಬಹು ನಿರೀಕ್ಷೆ ಮೂಡಿಸಿರುವ ‘ಬನ’ ಚಿತ್ರದ ಟ್ರೇಲರ್ ಇದೆ ನಾಗರಪಂಚಮಿಗೆ ಬಿಡುಗಡೆಯಾಗಲಿದೆ.ಬಹುತೇಕ ಯುವ ನಟರನ್ನು ಒಳಗೊಂಡ ಈ ಚಿತ್ರದಲ್ಲಿ ಮೊದಲ ಬಾರಿಗೆ ನಿಹಾಲ್ ರೈ ಹಾಗೂ ಶರತ್ ಆಳ್ವ ಪ್ರಮುಖ ಪಾತ್ರದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.


ಖ್ಯಾತ ವಾರ್ತಾ ವಾಚಕ ಜಯಪ್ರಕಾಶ್ ಶೆಟ್ಟಿ ತುಳು ಚಿತ್ರದಲ್ಲಿ ನಟಿಸುತ್ತಿರುವುದರಿಂದ ಈ ಚಿತ್ರ ಈಗಾಗಲೇ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.ಮನೋಹರ್ ರೈ ವೈಪಾಲ ‘ಈಶಿ ಪ್ರೊಡಕ್ಷನ್’ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಶಸ್ವಿ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ‘ನುಳಿಯಾಲು’ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಜಯ ಕಾರ್ತಿ ಅವರ ಸಂಗೀತ, ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ ಹಾಗೂ ನವೀನ್ ನೇರೋಳ್ತಡಿ ಅವರ ಸಂಕಲನ ಈ ಚಿತ್ರಕ್ಕಿದೆ.ಈ ಚಿತ್ರ ಕನ್ನಡ ಹಾಗೂ ತುಳುವಿನಲ್ಲಿ ಅಕ್ಟೋಬರ್ 23ಕ್ಕೆ ಬಿಡುಗಡೆಯಾಗಲಿದೆ.













