







ಪುತ್ತೂರು: ಒಡಿಯೂರು ಶ್ರೀಗಳ 65ನೇ ಜನ್ಮ ದಿನೋತ್ಸವದ ಪ್ರಯುಕ್ತ ಒಡಿಯೂರು ವಿಕಾಸವಾಹಿನಿ ಸ್ವಸಹಾಯ ಸಂಘದ ಸದಸ್ಯರಿಂದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜು.31ರಂದು ಸ್ವಚ್ಚತಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಸದಸ್ಯರಾದ ಚಂದ್ರಶೇಖರ ಕಣಿಯಾರು, ಕೆದಂಬಾಡಿ ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಪುತ್ತೂರು ವಲಯ ಸಂಯೋಜನಕಿ ಶಶಿ ಡಿ, ಕೆಯ್ಯೂರು ಘಟ ಸಮಿತಿ ಅಧ್ಯಕ್ಷೆ ದೇವರಾಣಿ, ಕಾರ್ಯದರ್ಶಿ ಶ್ವೇತಾ, ಕೆಯ್ಯೂರು ಸೇವಾ ದೀಕ್ಷಿತೆ ಗೀತಾ ಹರಿಪ್ರಸಾದ್, ಕೆದಂಬಾಡಿ ಸೇವಾ ದೀಕ್ಷಿಯೆ ಭಾರತಿ ಹಾಗೂ ದೇವಸ್ಥಾನದ ಸಿಬ್ಬಂದಿಗಳಾದ ಚಂದ್ರಶೇಖರ ರೈ ಕಜೆ, ಜಯಕಾಂತ, ಆನಂದ ಡಿ.ಎಸ್ ಹಾಗೂ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.













