ಪುತ್ತೂರು ತಾ.ಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾಗಿ ಸುಭಾಶ್ಚಂದ್ರ ಪಿ.ಜೆ ಅಧಿಕಾರ ಸ್ವೀಕಾರ

0

ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್ ನ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ & ಆಜೀವಿಕ ಮಿಷನ್ ಗ್ರಾಮೀಣ’ (ವಿ.ಬಿ.ಜಿ.ಆರ್.ಎಂ.ಜಿ ಯೋಜನೆ) ಯೋಜನೆಯ (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕರಾಗಿ ಸುಭಾಶ್ಚಂದ್ರ ಪಿ.ಜೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಅವರು ಪ್ರಸ್ತುತ ಕಬಕ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದು, ಹೆಚ್ಚುವರಿಯಾಗಿ ತಾಲೂಕು ಪಂಚಾಯತ್ ನಲ್ಲಿ (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಅವರು ಆ.1ರಂದು ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here