







ಪುತ್ತೂರು: ಕಳೆದ 5 ವರ್ಷದಿಂದ ಪುತ್ತೂರು ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಸಂಕೀರ್ಣದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ವಿಜಯ ಹೋಮಿಯೋ ಕ್ಲಿನಿಕ್ ದರ್ಬೆ ರಾಜೇಶ್ ಪವರ್ ಪ್ರೆಸ್ ಬಳಿಯ ವರದರಾಜ ಕಾಂಪ್ಲೆಕ್ಸ್ಗೆ ಸ್ಥಳಾಂತರೊಂಡು ಆ.1ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು.


ಕ್ಲಿನಿಕ್ನ ವೈದ್ಯರಾದ ಎಂ.ಡಿ. ಶೆಣೈ ಹಾಗೂ ಡಾ. ವರ್ಷಿಣಿ ಶೆಣೈ ದಂಪತಿ ಸ್ವಾಗತಿಸಿ ಸತ್ಕರಿಸಿ ಕ್ಲಿನಿಕ್ನಲ್ಲಿ ಜ್ವರ, ಶೀತ, ಮೂಗು ಸೋರುವಿಕೆ, ಅಲರ್ಜಿ, ಕೆಮ್ಮು, ಅಸ್ತಮಾ, ಗ್ಯಾಸ್ಟ್ರೈಟಿಸ್, ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, PCOD, ಬಂಜೆತನ, ಮೂತ್ರಪಿಂಡದ ಕಾಯಿಲೆಗಳು, ಮೈಗ್ರೇನ್, ಫಿಶರ್, ಫಿಸ್ಟುಲಾ, ಮೂಲವ್ಯಾಧಿ, ವೆರಿಕೋಸ್ ವೇಯ್ನ್ಸ್, ಮಾನಸಿಕ ಕಾಯಿಲೆಗಳಿಗೆ ಹೋಮಿಯೋಪತಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.




ಪುತ್ತೂರು ಶಾರದಾ ಸ್ಟೋರ್ ಮಾಲಕರಾದ ದೇವದಾಸ್ ಶೆಣೈ ಮತ್ತು ದಿವ್ಯಾ ಶೆಣೈ ದಂಪತಿ, ನಾರಾಯಣ ಶೆಣೈ, ಲಕ್ಷ್ಮೀ ಶೆಣೈ, ಸುಬ್ರಾಯ ಶೆಣೈ, ಗಣೇಶ್ ಶೆಣೈ, ಹರೀಶ್ ಶೆಣೈ, ಲತಾ ಶೆಣೈ, ವಾಸುದೇವ ಪೈ, ವನಿತಾ ಪೈ ಉಪಸ್ಥಿತರಿದ್ದರು. ವೈದ್ಯರಾದ ಎಂ.ಡಿ. ಶೆಣೈರವರು ಪ್ರತಿದಿನ ಬೆಳಿಗ್ಗೆ 10 ರಿಂದ 2 ರವರೆಗೆ, ಸಂಜೆ 4 ರಿಂದ ರಾತ್ರಿ 7 ರವರೆಗೆ ಲಭ್ಯವಿರುತ್ತಾರೆ. ಡಾ. ವರ್ಷಿಣಿ ಶೆಣೈರವರು ಪ್ರತೀ ಬುಧವಾರ ಮಾತ್ರ ಲಭ್ಯವಿರುತ್ತಾರೆ ಎಂದು ವೈದ್ಯರ ಪ್ರಕಟಣೆ ತಿಳಿಸಿದೆ.










