







ಬಡಗನ್ನೂರು: ಭಾರತೀಯ ಗಡಿ ಭದ್ರತಾ ದಳದ ಸೇನಾನಿ ಸುಂದರ ಪೂಜಾರಿ ತಮ್ಮ ಸೇವಾ ಅವಧಿಯಲ್ಲಿ ಸುಧೀರ್ಘ 34 ವರ್ಷಕಾಲ ಸೇವೆ ಸಲ್ಲಿಸಿ ಜು 31 ರಂದು ಸೇವಾ ನಿವೃತ್ತಿ ಹೊಂದಿ ಅ. 3 ರಂದು ಹುಟ್ಟೂರಿಗೆ ಆಗಮಿಸಲಿದ್ದಾರೆ. ಹುಟ್ಟೂರು ಪುತ್ತೂರಿನಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ


ಪುತ್ತೂರು ತಾಲೂಕು ಪಳ್ಳತ್ತಾರು (ಮುರ) ಲಿಂಗಪ್ಪ ಪೂಜಾರಿ ಮತ್ತು ಕಮಲ ದಂಪತಿಯ ತೃತೀಯ ಪುತ್ರರಾದ ಸುಂದರ ಪೂಜಾರಿ ರವರು 14-01-1972ರಲ್ಲಿ ಜನಿಸಿದ. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ. ಶಾಲೆ ಮುರದಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪುತ್ತೂರು ಕೊಂಬೆಟ್ಟು ಸ.ಪ್ರೌ.ಶಾಲೆಯಲ್ಲಿ ಪೂರೈಸಿದರು. ತದನಂತರ 1992ರಲ್ಲಿ ಭಾರತೀಯ ಗಡಿ ಭದ್ರತಾ ದಳಕ್ಕೆ ಆಯ್ಕೆಗೊಂಡು. ಬೆಂಗಳೂರಿನ ಯಲಹಂಕದಲ್ಲಿ ತರಭೇತಿ ಪಡೆದುಕೊಂಡರು ಬಳಿಕ ಪಂಜಾಬಿನ ಫಿರೋಜ್ ಪುರ, ಕಾಶ್ಮೀರದ ಬಾಂಡೀಪ್ರೊರ್, ಪಂಜಾಬಿನ, ಜಲಾಲಬಾದ್, ಕಾಶ್ಮೀರದ ಸೋಲಾಪುರ್,(ಕಾರ್ಗಿಲ್ ), ಅಮರನಾಥ ಯಾತ್ರ, (ಕಾಶ್ಮೀತ ಶ್ರೀನಗರ ), ತ್ರಿಪುರದ ಫಟೀಚರ, ಬಗಫ್, ಜಮ್ಮುವಿನ ಇಂದ್ರೇಶ್ವರ, ನಗರ, ನೌಸೇರಾ, ರಾಜಸ್ಥಾನದ ರಾಮ್ ಘಡ್, ಮಧ್ಯಪ್ರದೇಶದ ತೇಕನ್ ಪುರ್, ಕಾಗ್ರ ಉತ್ತರ ಬೆಂಗಾಲ್ ರಾಯ್‌ಪುರ್ ಛತ್ತೀಸ್‌ಗಡ್ (ನಕ್ಸ್ಲೈಟ್ ಪ್ರದೇಶ) ಪಂಜಾಬ್‌ನ ಮದೋಪುರ್ ಕರ್ತವ್ಯ ನಿರ್ವಹಿಸಿ ಜು 31ರಂದು ಸೇವಾ ನಿವೃತ್ತಿಹೊಂದಿ ಹುಟ್ಟೂರು ಪುತ್ತೂರಿಗೆ ಆಗಮಿಸಲಿದ್ದಾರೆ.



ಇವರು ಪ್ರಸ್ತುತ ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಪಳಂಬೆ ಯಶಸ್ವಿ ನಿಲಯದಲ್ಲಿ ಪತ್ನಿ ಭವಿತಾ (ಪಟ್ಟೆ ಪ್ರತಿಭಾ ಪ್ರೌಢಶಾಲಾ ಶಿಕ್ಷಕಿ) ಪುತ್ರಿ ಸಾನ್ವಿ ಪುತ್ರ ಸಮೃದ್ ರವರೊಂದಿಗೆ ವಾಸವಾಗಿರುತ್ತಾರೆ.
ಆ.3 ಹುಟ್ಟೂರಿಗೆ ಆಗಮನ ಸ್ವಾಗತ
ಭಾರತೀಯ ಗಡಿ ಭದ್ರತಾ ದಳದ ಸುಧೀರ್ಘ 34 ವರ್ಷಕಾಲ ಸೇವೆ ಸಲ್ಲಿಸಿ ಜು 31 ರಂದು ಸೇವಾ ನಿವೃತ್ತಿ ಹೊಂದಿ ಅ. 3 ರಂದು ಅಪರಾಹ್ನ ಗಂ 3 ಕ್ಕೆ ಹುಟ್ಟೂರಿಗೆ ಆಗಮಿಸುತ್ತಿರುವ ಸುಂದರ ಪೂಜಾರಿ ರವರಿಗೆ ತಮ್ಮ .ಹುಟ್ಟೂರು ಪುತ್ತೂರಿನ ಕಲ್ಲೇಗ ಭಾರತ್ ಸಭಾಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕ ಇವರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಪ್ರತ್ತೂರು. ಲಯನ್ಸ್ ಕ್ಲಬ್ ಪ್ರತ್ತೂರು ಮುತ್ತು. ಲಯನ್ಸ್ ಕ್ಲಬ್ ಅಲಂಕಾರ್ ದುಗಾರ್ಂಬಾ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್. ರೋಟರಿ ಕ್ಲಬ್ ಪ್ರತ್ತೂರು ಸೆಂಟ್ರಲ್, ತುಳು ವರ್ಲ್ಡ್ ಫೌಂಡೇಷನ್ ತುಳುವ ಮಹಾಸಭೆ ಪ್ರತ್ತೂರು ಘಟಕ ಇವರ ಸಹಯೋಗದೊಂದಿಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ.










