







ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.2ರಂದು ಸಂಘದ ಅಧ್ಯಕ್ಷರಾದ ಕರುಣಾಕರ ಪಾಂಗ್ಲಾಯಿರವರ ಅಧ್ಯಕ್ಷತೆಯಲ್ಲಿ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಜರಗಿತು.


ಸಂಘದ ಅಧ್ಯಕ್ಷ ಕರುಣಾಕರ್ ಪಾಂಗ್ಲಾಯಿ ಮಾತನಾಡಿ, ಗತವರ್ಷದಲ್ಲಿ ಸಂಘದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇಷ್ಟೊಂದು ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಅದು ಕೇವಲ ಮಾತೃಸಂಘದಿಂದ ಮಾತ್ರ ಸಾಧ್ಯವಿಲ್ಲ. ಅದು ತಾಲೂಕಿನ 16 ಗ್ರಾಮ ಸಮಿತಿಗಳು, ಮಹಿಳಾ ವೇದಿಕೆ, ಯುವ ವೇದಿಕೆ, ಸಮಾಜ ಬಂಧುಗಳ ಸಹಕಾರದಿಂದಾಗಿದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಅಲ್ಲಿ ಸಮಾಜ ಬಂಧುಗಳು ಒಗ್ಗಟ್ಟಾದಾಗ ಮಾತ್ರ. ಮುಂದಿನ ವರ್ಷ ಸಂಘವು ಸುವರ್ಣ ವರ್ಷದತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ಸಂಘವು ಮತ್ತಷ್ಟು ಯಶಸ್ವಿಯತ್ತ ಸಾಗಲು ಎಲ್ಲರ ಸಹಕಾರವಿರಲಿ ಎಂದರು.




ಕಾರ್ಯಕಾರಿ ಸಮಿತಿ ರಚನೆ:
2026-27ನೇ ಸಾಲಿನ ನೂತನ 36 ಮಂದಿಯ ಕಾರ್ಯಕಾರಿ ಸಮಿತಿಯನ್ನು ಚುನಾವಣಾಧಿಕಾರಿಗಳಾದ ಮಂಜುನಾಥ ಎನ್.ಎಸ್ ಹಾಗೂ ವಾಸು ನಾಯ್ಕರವರು ನೆರವೇರಿಸಿಕೊಟ್ಟರು.ನಾಗವೇಣಿ ಹಾಗೂ ಮಮತಾ ಪ್ರಾರ್ಥಿಸಿದರು. ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ದುಗ್ಗಪ್ಪ ಬಡಾವು ಸ್ವಾಗತಿಸಿ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ ಕೆ ವಂದಿಸಿದರು. ಕಾರ್ಯದರ್ಶಿ ಜಿ.ರಾಮ ನಾಯ್ಕ ವಾರ್ಷಿಕ ವರದಿ ಮಂಡಿಸಿದರು. ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ನಾಯ್ಕ ಕೇಪುಳುರವರು ಗತ ವರ್ಷದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಸಂತಾಪ ಸೂಚನೆಯನ್ನು ನೆರವೇರಿಸಿದರು. ಕೋಶಾಧಿಕಾರಿ ಕೆ.ಈಶ್ವರ ನಾಯ್ಕ ಸಂಘದ ವಾರ್ಷಿಕ ಲೆಕ್ಕಪತ್ರ, 2026-27ನೇ ಸಾಲಿನ ಅಂದಾಜು ಆಯ-ವ್ಯಯ ಮಂಡಿಸಿದರು. ಉಪಾಧ್ಯಕ್ಷ ಸೀತಾರಾಮ ನಾಯ್ಕ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಶ್ರೀ ಮಹಾಲಿಂಗೇಶ್ವರ ದೇವಳದ ಪುನರ್ ನಿರ್ಮಾಣದ ಕಂಡ ನಾಯ್ಕರ ಕಟ್ಟೆಗೆ ರೂ.50 ಸಾವಿರಕ್ಕೂ ಮಿಕ್ಕಿ ದೇಣಿಗೆ ನೀಡಲು ಸಹಕರಿಸಿದ ಬಾಲಕೃಷ್ಣ ನಾಯ್ಕ ಕಪ್ಪೆಕೆರೆ, ನರಿಮೊಗರು ಮರಾಟಿ ಸಮಾಜ ಸೇವಾ ಸಂಘ, ಪಟ್ಟೆ-ಪಡುಮಲೆ ಮರಾಟಿ ಸಮಾಜ ಸೇವಾ ಸಂಘ, ಗೆಣಸಿನಕುಮೇರು ಕುಟುಂಬ, ಶ್ರೀ ಮಹಾಮ್ಮಾಯ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷರುಗಳನ್ನು ಗುರುತಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಕಂಡ ನಾಯ್ಕರ ಕಟ್ಟೆಗೆ ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಮತ್ತು ಸಮಾಜ ಬಾಂಧವರಿಂದ ಒಟ್ಟು ರೂ 8.80 ಲಕ್ಷ ನೀಡಲಾಗಿರುತ್ತದೆ. ಸಂಘದ ಮಾಜಿ ಅಧ್ಯಕ್ಷ ದುಗ್ಗಪ್ಪ ನಾಯ್ಕ ಬಡಾವುರವರು ಈ ಬಗ್ಗೆ ಸಭೆಗೆ ಪ್ರಸ್ತಾಪಿಸಿದರು.










