







ಕಾವು: ಕುಡ್ಪುನಡ್ಕ ನರ್ಸಿಗಣದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದೆ.Fronx Maruti Suzuki ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಒಂದು ವಿದ್ಯುತ್ ಕಂಬ ಮುರಿದು ಬಿದ್ದು, ಮತ್ತೊಂದು ಕಂಬಕ್ಕೂ ಹಾನಿಯಾಗಿದೆ. ಮುರಿದ ಕಂಬದ ಲೈನ್ ಕಟ್ ಆಗದಿರುವುದರಿಂದ ತಂತಿಗಳು ನೆಲಕ್ಕೆ ಬಿದ್ದಿಲ್ಲ.ವಾಹನ ಸವಾರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಬಳಿಕ ಕಾರಿನಲ್ಲಿದ್ದವರು ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.













