






ಪುತ್ತೂರು : ಆ. 7 ರಂದು ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಬೃಹತ್ ‘ತಿರಂಗಾ ಯಾತ್ರೆ’ಯ ಯಶಸ್ಸಿಗಾಗಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಕುಂಬ್ರ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಅವರು, “ಪುತ್ತೂರಿನಲ್ಲಿ ನಡೆಯಲಿರುವ ತಿರಂಗಾ ಯಾತ್ರೆಯು ಐತಿಹಾಸಿಕವಾಗಿ ಮೂಡಿಬರಲಿದ್ದು, ದೇಶಪ್ರೇಮದ ಸಂದೇಶ ಸಾರುವ ಈ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು,” ಎಂದು ಕರೆ ನೀಡಿ ಯಾತ್ರೆಯ ರೂಪುರೇಷೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.



ಕಾರ್ಯಕ್ರಮದ ಆರಂಭದಲ್ಲಿ ಸಹಜ್ ರೈ ಬಳಜ್ಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಗಮಿಸಿದ ಗಣ್ಯರನ್ನು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದರು.ಸಭೆಯಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಪ್ರಭಾರಿ ರತನ್ ರೈ ಕುಂಬ್ರ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಯುವಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿಶಿರ್ ಪೆರ್ವೋಡಿ, ಜಿಲ್ಲಾ ಪದಾಧಿಕಾರಿಗಳಾದ ನಿಶಾಂತ್ ಪೂಜಾರಿ, ಮುರಳಿ ಕೊಣಾಜೆ, ಶಿವಕಿರಣ್ ಭಟ್ ಉಪಸ್ಥಿತರಿದ್ದರು. ಅಲ್ಲದೆ ಮಂಡಲ ಪದಾಧಿಕಾರಿಗಳಾದ ಆದೇಶ್ ಶೆಟ್ಟಿ ಉಪ್ಪಿನಂಗಡಿ, ನಿತಿನ್ ಬುಡ್ಡೊನಿ, ಪವನ್ ಕಂಬಳತ್ತಡ್ಡ, ವಿನೋದ್ ರಾಜ್, ಧನುಷ್ ಹೊಸಮನೆ, ಮಂಜುನಾಥ್ ದುಗ್ಗಳ, ಸಚಿನ್ ಶೆಟ್ಟಿ ಪಟ್ಟೆ, ಪ್ರದೀಪ್ ರೈ ಕರ್ನೂರು, ಪ್ರಶಾಂತ ಕಬಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಉತ್ಸಾಹಿ ಯುವಕರು ಭಾಗವಹಿಸಿ ಯಾತ್ರೆಯ ಯಶಸ್ಸಿಗೆ ಶ್ರಮಿಸುವ ಸಂಕಲ್ಪ ಮಾಡಿದರು.













