






ಪುತ್ತೂರು: ಜವುಳಿ ಖರೀದಿ ಎಂದಾಕ್ಷಣ ಪುತ್ತೂರಿನ ಜನತೆಗೆ ನೆನಪಾಗುವ, ಇಲ್ಲಿನ ಮುಖ್ಯರಸ್ತೆಯಲ್ಲಿರುವ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ, ಪುತ್ತೂರಿನವರೊಂದಿಗೆ ಹತ್ತೂರಿನವರೂ ಮೆಚ್ಚುಗೆ ಮಡೆದ ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುವ ಜವುಳಿಗಳ ಆಟಿ ಸೇಲ್ ಇನ್ನು ಕೆಲವು ದಿನಗಳು ಮಾತ್ರ ನಡೆಯಲಿದೆ.



ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆಷಾಡ ಮಾಸದಲ್ಲಿ ವರ್ಷಕ್ಕೆ ಒಂದು ಬಾರಿ ಆಟಿದ ಸೇಲ್ ಆಯೋಜಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಆಟಿ ತಿಂಗಳ ಸೇಲ್ ಜುಲೈ ೬ರಿಂದ ಆರಂಭಿಸಲಾಗಿತ್ತು. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ, ಪ್ಯಾಂಟ್, ಶರ್ಟ್, ಚೂಡಿದಾರ್, ಇನ್ನಿತರ ಜವುಳಿಗಳನ್ನು ಮಿಲ್‌ಗಳಿಂದ ನೇರ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಗ್ರಾಹಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಮಳಿಗೆ ತುಂಬಾ ಗ್ರಾಹಕರು ತಮಗೆ ಇಷ್ಟವಾದ ಬಟ್ಟೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅತೀ ಕಡಿಮೆ ದರದಲ್ಲಿ ಮಕ್ಕಳ, ಮಹಿಳೆಯರ, ಪುರುಷರ ವಿವಿಧ ವಿನ್ಯಾಸದ ರೆಡಿಮೇಡ್ ಬಟ್ಟೆಗಳು ಲಭ್ಯವಿದೆ.



ಮಳಿಗೆ ಅತ್ಯಂತ ವಿಶಾಲವಾದ ಸ್ಥಳಾವಕಾಶ ಹೊಂದಿದ್ದು ಗ್ರಾಹಕರಿಗೆ ವಿಪುಲ ಹಾಗೂ ಆರಾಮದಾಯಕ ಆಯ್ಕೆಗೆ ಅನುಕೂಲವಾಗಿದೆ. ಈ ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಪುತ್ತೂರು ಅಲ್ಲದೇ ದೂರದ ಊರುಗಳಿಂದ ಕೂಡ ಗ್ರಾಹಕರು ಉತ್ತಮ ಸ್ಪಂದನೆ ನೀಡುತ್ತಿದ್ದು ಇನ್ನು ಕೆಲವೇ ದಿನಗಳು ಮಾತ್ರ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










