







ಪುತ್ತೂರು: ಭಾರತೀಯ ಕೃಷಿ ಸಂಶೋಧನಾ ಪರಿಷತ್- ರಾಷ್ಟ್ರೀಯ ಕೃಷಿ ನಾವೀನ್ಯತೆ ನಿಧಿ (ICAR-NAIF) ಪ್ರಾಯೋಜಿತ ರಾಷ್ಟ್ರವ್ಯಾಪಿ ಸ್ಟಾರ್ಟಪ್ ಇನ್ಕ್ಯುಬೇಷನ್ ಕಾರ್ಯಕ್ರಮವಾದ “SHITIJ 2.0″ನ್ನು ಐ.ಸಿ.ಎ.ಆರ್ನ ಹೆಚ್ಚುವರಿ ಮಹಾನಿರ್ದೇಶಕ (ಹಣ್ಣುಗಳು ಮತ್ತು ತೋಟಗಾರಿಕಾ ಬೆಳೆಗಳು) ಡಾ. ವಿ. ಬಿ. ಪಟೇಲ್ ಅವರು ಕಾಸರಗೋಡಿನ ICAR ಕೇಂದ್ರೀಯ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (ICAR-CPCRI) ವರ್ಚುವಲ್ ಮಾಧ್ಯಮದ ಮೂಲಕ ಉದ್ಘಾಟಿಸಿದರು. SHITIJ ನ ಈ ಎರಡನೇ ಆವೃತ್ತಿಯನ್ನು ಏಳು “ಹಬ್” (ಪ್ರಮುಖ) ಸಂಸ್ಥೆಗಳು ಮತ್ತು ಅವುಗಳಿಗೆ ಸಂಬಂಧಿಸಿದ “ಸ್ಪೋಕ್” (ಅನುಬಂಧಿತ) ಸಂಸ್ಥೆಗಳ ರಾಷ್ಟ್ರವ್ಯಾಪಿ ಜಾಲದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಐ.ಸಿ.ಎ.ಆರ್.- ಸಿ.ಪಿ.ಸಿ.ಆರ್.ಐ. ಅನ್ನು ಏಳು ಹಬ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಲಾಗಿದೆ.


ಉದ್ಯಮಿಗಳು, ನಾವೀನ್ಯಕಾರರು, ವಿದ್ಯಾರ್ಥಿಗಳು ಮತ್ತು ರೈತರಿಂದ ಅರ್ಜಿ ಆಹ್ವಾನ:
“SHITIJ 2.0” ಎಂಬುದು ತೋಟಗಾರಿಕಾ ಬೆಳೆಗಳು, ಹಣ್ಣುಗಳು, ತರಕಾರಿಗಳು ಮತ್ತು ಕಬ್ಬಿನ ಮೌಲ್ಯ ಸರಪಳಿಗಳಲ್ಲಿ ವಾಣಿಜ್ಯ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು, ನಾವೀನ್ಯಕಾರರು, ವಿದ್ಯಾರ್ಥಿಗಳು ಮತ್ತು ರೈತರಿಗಾಗಿ (ಉತ್ಪನ್ನದ ಮಾದರಿಗಳು, ನವೀನ ಆಲೋಚನೆಗಳು ಮತ್ತು ಆರಂಭಿಕ ಹಂತದ ವ್ಯವಹಾರ ಅಭಿವೃದ್ಧಿ ಹೊಂದಿರುವವರು) ರೂಪಿಸಲಾದ ರಾಷ್ಟ್ರವ್ಯಾಪಿ ಸ್ಟಾರ್ಟಪ್ ಇನ್ಕ್ಯುಬೇಷನ್ ಕಾರ್ಯಕ್ರಮವಾಗಿದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ತಿಂಗಳ ಉಚಿತ ಆನ್ಲೈನ್ ಉದ್ಯಮಶೀಲತಾ ತರಬೇತಿ ಪಡೆಯುತ್ತಾರೆ ಮತ್ತು ತಾಂತ್ರಿಕ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಬೆಂಬಲ ಹಾಗೂ ಆರ್ಥಿಕ ನೆರವು ಪಡೆಯುವ ಕುರಿತು ಮಾರ್ಗದರ್ಶನ ಪಡೆಯುತ್ತಾರೆ. ಆಯ್ಕೆಯಾದವರು ICAR-CPCRI (ಕಾಸರಗೋಡು), ICAR-CTCRI (ತಿರುವನಂತಪುರಂ) ಮತ್ತು ಇತರ ಸಹಯೋಗದ ಸಂಸ್ಥೆಗಳು ಸೇರಿದಂತೆ ವಿವಿಧ ICAR ಸಂಸ್ಥೆಗಳಲ್ಲಿ ಲಭ್ಯವಿರುವ ಇನ್ಕ್ಯುಬೇಷನ್ ಸೌಲಭ್ಯಗಳು ಮತ್ತು ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಆಗಸ್ಟ್ 2026 ಆಗಿದೆ. ಹೆಚ್ಚಿನ ವಿವರಗಳಿಗಾಗಿ, ಆಸಕ್ತ ಅಭ್ಯರ್ಥಿಗಳು +91 9466963690 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ [email protected] ಅಥವಾ [email protected] ಗೆ ಇಮೇಲ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.













