ಕೆಟ್ಟು ಹೋದ ಸೂರಂಬೈಲು ತೂಂಬಡ್ಕ ರಸ್ತೆ : ಶಾಸಕರ ಸೂಚನೆ ಮೇರೆಗೆ ರಸ್ತೆಯ ತುರ್ತು ದುರಸ್ಥಿ

0

ನಿಡ್ಪಳ್ಳಿ: ಪಾಣಾಜೆ ಗ್ರಾಮದ ಸೂರಂಬೈಲಿನಿಂದ ತೂಂಬಡ್ಕ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ಜಲ್ಲಿ ಹಾಕುವ ಮೂಲಕ ದುರಸ್ಥಿ ಕಾರ್ಯ ಆ.5ರಂದು ನಡೆದಿದೆ.

ಈ ರಸ್ತೆಯು ಗಿಳಿಯಾಲು, ರಣಮಂಗಲ ದೇವಸ್ಥಾನ, ದೇವಸ್ಯ ಮೂಲಕ ಜಾಂಬ್ರಿ ಗುಹೆ ಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ನೆಲ್ಲಿತ್ತಿಮಾರು ಎಂಬಲ್ಲಿ ರಸ್ತೆ ಬದಿ ಕುಸಿದ ಪರಿಣಾಮ ಮತ್ತು ಮುಂದೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದರಿಂದ ಜಾಂಬ್ರಿ ಗುಹೆ ಹೋಗುವ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆದುದರಿಂದ ಸಾರ್ವಜನಿಕರು ಸೂರಂಬೈಲು ರಸ್ತೆಯನ್ನು ಬಳಸಿ ಸಾಗ ಬೇಕಾದ ಪರಿಸ್ಥಿತಿ ನಿರ್ಮಾಣವಾದ ಕಾರಣ ಕೆಟ್ಟು ಹೋದ ಸೂರಂಬೈಲು ರಸ್ತೆಯನ್ನು ಜಲ್ಲಿ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾಮಗಾರಿ ಕೈಗೊಳ್ಳಲಾಗಿದೆ.

ಗುತ್ತಿಗೆದಾರ ಸದಾಶಿವ ರೈ ಹಾಗೂ ಗ್ರಾಮಸ್ಥರ ಕೇಳಿಕೆ ಮೇರೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ಮನಗಂಡ ಶಾಸಕ ಅಶೋಕ್ ಕುಮಾರ್ ರೈಯವರು ಸೂಚಿಸಿದಂತೆ ಟಿಪ್ಪರಿನಲ್ಲಿ ಜಲ್ಲಿ ತಂದು ಹಾಕಿ ತುರ್ತು ದುರಸ್ಥಿ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here