







ಪುತ್ತೂರು: ತುಳು ನಾಡಗೀತೆಯ 125ನೇ ವರ್ಷಾಚರಣೆಯ ಅಂಗವಾಗಿ ತುಳು ವರ್ಲ್ಡ್ ಫೌಂಡೇಷನ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಮೆತ್ತಡ್ಕದಲ್ಲಿ ನಡೆಯಿತು.



ಕಾರ್ಯಕ್ರಮಕ್ಕೆ ತುಳು ವರ್ಲ್ಡ್ ಫೌಂಡೇಷನ್ ಸಮಿತಿಯ ಸಂಚಾಲಕರಾದ ಮನೋಹರ್ ರೈ, ಅಧ್ಯಕ್ಷೆ ವೇದಾವತಿ ರಾಜೇಶ್, ಉಪಾಧ್ಯಕ್ಷರಾದ ನಯನಾ ರೈ, ಇಂದಿರಾ ರೈ, ಖಜಾಂಜಿ ಪುಷ್ಪಲತಾ ಕೆ ಅವರು ಆಗಮಿಸಿದರು. ಅತಿಥಿಗಳು ಮಕ್ಕಳೊಂದಿಗೆ ತುಳು ನಾಡಗೀತೆಯನ್ನು ಹಾಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜಲಜಾ ಮೇಡಂ, ಶಿಕ್ಷಕ ವೃಂದ ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿ ಶ್ರೀಮತಿ ಮರಿಯಾ ಅವರು ನಿರೂಪಿಸಿದರು.ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.













