ಪಡುಮಲೆ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ 

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಆ.9ರಂದು ದೇವಸ್ಥಾನ ಆವರಣದಲ್ಲಿ ನಡೆಯಿತು.

ಆರಂಭದಲ್ಲಿ ಆಮಂತ್ರಣ ಪತ್ರಿಕೆ ಶ್ರೀ ದೇವರಿಗೆ ಇಟ್ಟು  ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಬಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಸತೀಶ್ ರೈ ಕಟ್ಟಾವು, ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ, ಪುರಂದರ ರೈ ಕುದ್ಕಾಡಿ, ಶ್ರೀನಿವಾಸ್ ಗೌಡ ಕನ್ನಯ, ಶಂಕರಿ ಪಟ್ಟೆ, ಬೆಟ್ಟಂಪಾಡಿ ವಲಯ ಜನಜಾಗೃತಿ ಮಾಜಿ ಅಧ್ಯಕ್ಷ ನಾರಾಯಣ ರೖೆ ಕುದ್ಕಾಡಿ ಕಟ್ಟೆ, ಪುತ್ತೂರು ಭಜನಾ ಪರಿಷತ್ ಮಾಜ ಅಧ್ಯಕ್ಷ ಸುಬ್ಬಯ್ಯ ರೖೆಹಲಸಿನಡಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ  ಭಾರತಿ ರೈ ಕುದ್ಕಾಡಿ, ಕಾರ್ಯದರ್ಶಿ  ಭವ್ಯ  ಪಡುಮಲೆ, ಜೊತೆ ಕಾರ್ಯದರ್ಶಿ  ವಿನೋದ ರೈ ಸೇನೆರೆಮಜಲು, ಕೋಶಾಧಿಕಾರಿ  ಸುನಿತಾ ರೈ ಮೇಗಿನಮನೆ, ಗೌರವ ಸಲಹೆಗಾರರಾದ ಸುಧಾ ಎಸ್ ರೈ ಕಟ್ಟಾವು, ಮಲ್ಲಿಕಾ ಕೋಡಿಯಡ್ಕ, ದೇವಿಪ್ರಭ ರೈ ನೆಕ್ಕರೆ, ಪುಷ್ಪಾವತಿ ರೖೆ ಕೆ.ಪಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here